Tuesday, December 30, 2025

Read It | ಮಾರ್ನಿಂಗ್ ಬ್ರೇಕ್ ಫಾಸ್ಟ್ ತಿಂದಿಲ್ಲ ಅಂದ್ರೆ ನಮ್ಮ ದೇಹಕ್ಕೆ ಎಷ್ಟು ಕಷ್ಟ ನೋಡಿ!

ಬೆಳಗ್ಗೆ ಎದ್ದ ತಕ್ಷಣ ಚಹಾ ಅಥವಾ ಕಾಫಿ ಕುಡಿಯೋದು ಸಾಕಾಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಕೆಲವರು ಸಮಯದ ಕೊರತೆಯಿಂದ ಉಪಹಾರವನ್ನೇ ಬಿಟ್ಟು ಕಚೇರಿಗೆ ಓಡುತ್ತಾರೆ. ಇನ್ನು ಕೆಲವರು ವಡಸಿನದಿಂದ ತಿನ್ನದೇ ಹಾಗಿ ಬಿಟ್ಟುಬಿಡುತ್ತಾರೆ. ಆದರೆ, ಬೆಳಗಿನ ಉಪಹಾರ ಸೇವಿಸದಿರುವುದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ದೇಹಕ್ಕೆ ದಿನಪೂರ್ತಿ ಶಕ್ತಿ ನೀಡಲು, ಮೆದುಳಿನ ಕಾರ್ಯಕ್ಷಮತೆಯನ್ನು ಸುಧಾರಿಸಲು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಕಟ್ಟಿಕೊಳ್ಳಲು ಬೆಳಗಿನ ಉಪಹಾರ ಅತ್ಯಂತ ಮುಖ್ಯವಾಗಿದೆ.

ಉಪಹಾರ ಸೇವಿಸದಿದ್ರೆ ಏನಾಗುತ್ತೆ ಗೊತ್ತಾ?

  • ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾಗುತ್ತದೆ, ಆಯಾಸ, ಕಿರಿಕಿರಿ, ಮಧುಮೇಹದ ಅಪಾಯ ಹೆಚ್ಚಾಗುತ್ತದೆ.
  • ಚಯಾಪಚಯ ಕ್ರಿಯೆ ನಿಧಾನಗೊಳ್ಳುತ್ತದೆ, ಕ್ಯಾಲೊರಿಗಳು ಸರಿಯಾಗಿ ಬರ್ನ್ ಆಗೋದಿಲ್ಲ
  • ಜೀವಕೋಶಗಳ ಹಾನಿ ಮತ್ತು ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ.
  • ದೈಹಿಕ ಶಕ್ತಿ ಕಡಿಮೆಯಾಗುತ್ತದೆ, ಕೆಲಸದ ಮೇಲೆ ಒತ್ತಡ ಹೆಚ್ಚಾಗುತ್ತದೆ.
  • ದೇಹದ ತೂಕ ಹೆಚ್ಚುವ ಅಪಾಯವನ್ನು ಉಂಟುಮಾಡುತ್ತದೆ.

ಪೌಷ್ಟಿಕತೆಯೊಂದಿಗೆ ಆರೋಗ್ಯಕರ ಉಪಹಾರ:

  • ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ಗಳ ಸಮತೋಲನದಿಂದ ದಿನವನ್ನು ಪ್ರಾರಂಭಿಸುವುದು ಉತ್ತಮ.
  • ಹಣ್ಣು, ಮೊಸರು, ಬೀಜಗಳು, ಉಪ್ಪುಹೀನ ತರಕಾರಿ, ಜೋಳ, ಓಟ್ಸ್ ಮುಂತಾದ ಪದಾರ್ಥಗಳನ್ನು ಉಪಹಾರದಲ್ಲಿ ಸೇರಿಸಬಹುದು.
  • ಬೆಳಗಿನ ಉಪಹಾರ ದಿನದ ಒತ್ತಡವನ್ನು ಕಡಿಮೆ ಮಾಡುವ ಜೊತೆಗೆ ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ಬೆಳಗಿನ ಉಪಹಾರವೇ ದೈಹಿಕ, ಮಾನಸಿಕ ಶಕ್ತಿ ಮತ್ತು ಆರೋಗ್ಯದ ಪ್ರಮುಖ ಅಡಿಪಾಯ. ದಿನದ ಆರಂಭದಲ್ಲಿ ಸರಿಯಾದ ಪೌಷ್ಟಿಕಾಂಶವನ್ನು ಪಡೆಯುವುದು, ದೇಹವನ್ನು ಜಾಗೃತಗೊಳಿಸುವುದಲ್ಲದೆ, ದಿನಪೂರ್ತಿ ಉತ್ಸಾಹದಿಂದ ಕೆಲಸ ನಿರ್ವಹಿಸಲು ಸಹಾಯ ಮಾಡುತ್ತದೆ. ಉಪಹಾರವಿಲ್ಲದೆ ಬೆಳಗಿನ ದಿನಾರಂಭವು ದೇಹದ ಚಯಾಪಚಯ ಮತ್ತು ಶಕ್ತಿಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ.

error: Content is protected !!