ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಯಲಹಂಕದ ಕೋಗಿಲು ಬಡಾವಣೆಯಲ್ಲಿ ಮನೆಗಳ ಧ್ವಂಸ ಪ್ರಕರಣ ಸಂಬಂಧ ರಾಜ್ಯ ಸರಕಾರ ರಾಜೀವ್ ಗಾಂಧಿ ವಸತಿ ಯೋಜನೆ ಅಡಿ ಮನೆ ಕೊಡಲು ಮುಂದಾಗಿದೆ.
ಇತ್ತ ಅಕ್ರಮ ಒತ್ತುವರಿ ತೆರವು ಮಾಡಿ, ಮನೆ ಕೊಡುತ್ತಿರುವ ಸರ್ಕಾರದ ನಡೆ ವಿಪಕ್ಷಗಳ ಪಾಲಿಗೆ ಬ್ರಹ್ಮಾಸ್ತ್ರವಾಗಿವಾಗಿದೆ. ರಾಜ್ಯದ 6 ಕೋಟಿ ಜನ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ರನ್ನು ಆಯ್ಕೆ ಮಾಡಿದ್ದಾರೆ. ಕೆ.ಸಿ.ವೇಣುಗೋಪಾಲ್ರನ್ನು ಆಯ್ಕೆ ಮಾಡಿಲ್ಲ.ವೇಣುಗೋಪಾಲ್ ಮಾತು ಕೇಳಿಕೊಂಡು ಆಡಳಿತ ಮಾಡುವುದು 6 ಕೋಟಿ ಜನರಿಗೆ ಮಾಡಿರುವ ಅವಮಾನ ಎಂದು ರಾಜ್ಯಸಭಾ ಬಿಜೆಪಿ ಸದಸ್ಯ ಲಹರ್ ಸಿಂಗ್ ಸಿರೋಯಾ ವಾಗ್ದಾಳಿ ನಡೆಸಿದ್ದಾರೆ.
ಈ ಸರ್ಕಾರದಿಂದ ಏನೂ ಅಪೇಕ್ಷೆ ಪಡಲು ಸಾಧ್ಯವೇ ಇಲ್ಲ. ಸೋ ಕಾಲ್ಡ್ ಪವರ್ ಫುಲ್ ಲೀಡರ್ಗಳಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಕೆ.ಸಿ.ವೇಣುಗೋಪಾಲ್ ಮಾತು ಕೇಳಿ ನಾಚಿಕೆಗೇಡಿನ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಕೆಸಿ ವೇಣುಗೋಪಾಲ ಅಂತಹವರು ನಮ್ಮ ಸರ್ಕಾರ ನಡೆಸಬೇಕಾ? ಅವರ ಆದೇಶ ನಾವು ಪಾಲಿಸಬೇಕಾ? ಈ ಸರ್ಕಾರ ಕೇವಲ ಕುರ್ಚಿ ಜಗಳಕ್ಕೆ ಮಾತ್ರ ಸೀಮಿತ ಅಷ್ಟೇ. ಪ್ರವಾಹ ಸಂತ್ರಸ್ತರಿಗೆ ಮನೆ ಕೊಟ್ಟಿಲ್ಲ, ಡ್ರಗ್ಸ್ ಸಮಸ್ಯೆ ಸರಿಪಡಿಸಿಲ್ಲ, ಇಂತಹ ಸರ್ಕಾರ ನಮಗೆ ಸಿಕ್ಕಿರುವುದು ದುರದೃಷ್ಟಕರ. ಪಾಕಿಸ್ತಾನ ಪ್ರತಿಕ್ರಿಯೆ ಕೊಡುತ್ತದೆ ಎಂದರೆ, ಇದು ಬಹಳ ಭಯನಕ ಟ್ರೆಂಡ್. ಪಶ್ಚಿಮ ಬಂಗಾಳ ರೀತಿ ಇಲ್ಲಿ ಆದರೆ ನಮ್ಮ ಗತಿ ಏನು ಎಂದು ರಾಜ್ಯಸಭಾ ಸದಸ್ಯ ಲಹರ್ ಸಿಂಗ್ ಸಿರೋಯಾ ಪ್ರಶ್ನೆ ಮಾಡಿದ್ದಾರೆ.

