Wednesday, December 31, 2025

ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಿದ ದ್ವೀಪ ರಾಷ್ಟ್ರ ಕಿರಿಬಾಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ಹೊಸ ವರ್ಷಾಚರಣೆಗೆ ಕ್ಷಣಗಣನೆ ಬಾಕಿ ಉಳಿದಿದ್ದು, ಇತ್ತ ಪೆಸಿಫಿಕ್‌ನಲ್ಲಿರುವ ಒಂದು ಸಣ್ಣ ದ್ವೀಪ ರಾಷ್ಟ್ರ ಕಿರಿಬಾಟಿ ಹೊಸ ವರ್ಷವನ್ನು ಸ್ವಾಗತಿಸಿದೆ.

ಭಾರತೀಯ ಕಾಲಮಾನ ಮಧ್ಯಾಹ್ನ 3:30ಕ್ಕೆ ಕಿರುಬಾಟಿ 2026ಕ್ಕೆ ಅಧಿಕೃತವಾಗಿ ಕಾಲಿಟ್ಟಿತು. ಭಾರತದ ಕಾಲಮಾನಕ್ಕಿಂತ ಸುಮಾರು 8 ಗಂಟೆ 30 ನಿಮಿಷದ ಮೊದಲು ಕಿರಿಬಾಟಿಯಲ್ಲಿ ಹೊಸವರ್ಷ ಆರಂಭವಾಗುತ್ತದೆ.

ಕಿರಿಬಾಟಿ ಗ್ರೀನ್‌ವಿಚ್ ಸಮಯಕ್ಕಿಂತ 14 ಗಂಟೆಗಳ ಮುಂದೆ ಮತ್ತು ಪ್ರಪಂಚದ ಅನೇಕ ಭಾಗಗಳಿಗಿಂತ ಒಂದು ದಿನ ಮುಂದಿದೆ. ಈ ಪುಟ್ಟ ದ್ವೀಪ ರಾಷ್ಟದಲ್ಲಿ 1.20 ಲಕ್ಷ ಜನಸಂಖ್ಯೆ ಇದೆ. ಭೂಮಿಯ ಮೇಲಿನ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ.

ಮಧ್ಯ ಪೆಸಿಫಿಕ್‌ನಲ್ಲಿರುವ ಜನವಸತಿಯಿಲ್ಲದ ಅಮೆರಿಕದ ಅಕರ್ ಮತ್ತು ಹೌಲ್ಯಾಂಡ್ ದ್ವೀಪಗಳು ಹೊಸ ವರ್ಷವನ್ನು ಆಚರಿಸುವ ಕೊನೆಯ ಸ್ಥಳಗಳಾಗಿವೆ.

error: Content is protected !!