Wednesday, December 31, 2025

ನಿಂತಲ್ಲೆ ನಿಂತ ಗೂಡ್ಸ್ ರೈಲು: ಹಸನ್ಮಾಳಕ್ಕೆ ಹೋಗಲು ದಿಗ್ಭಂಧನ, ಪ್ರವಾಸಿಗರು ಪರದಾಟ

ಹೊಸದಿಗಂತ ವರದಿ, ದಾಂಡೇಲಿ :

ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಗೆ ಕಚ್ಚಾ ವಸ್ತುಗಳನ್ನು ಹೇರಿಕೊಂಡು ಬರುವ ಗೂಡ್ಸ್ ರೈಲೊಂದು ಸರಿ ಸುಮಾರು ಐದಾರು ಗಂಟೆ ನಿಂತಲ್ಲೇ ನಿಂತ ಪರಿಣಾಮವಾಗಿ ಟ್ರಾಫಿಕ್ ಜಾಮ್ ಆಗಿ ಹಸನ್ಮಾಳಕ್ಕೆ ಹೋಗಲು ದಿಗ್ಬಂಧನ ಹಾಕಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಇದರಿಂದ ಇತ್ತ ಹಸನ್ಮಾಳದಿಂದ ನಗರಕ್ಕೆ ಬರಲು ಸಂಕಷ್ಟ ಎದುರಾಗಿತ್ತು. ತಾಂತ್ರಿಕ ಸಮಸ್ಯೆಯಿಂದ ಈ ರೀತಿಯಾದರೂ, ವರ್ಷಾಂತ್ಯದಲ್ಲಿ ಈ ಸಮಸ್ಯೆ ಎದುರಾಗಿರುವುದರಿಂದ ಪ್ರವಾಸಿಗರು ಧರ್ಮ ಸಂಕಟಕ್ಕೊಳಗಾಗಬೇಕಾಯ್ತು.

ಹಸನ್ಮಾಳದಲ್ಲಿ ನಾಲ್ಕೈದು ಹೋಂ ಸ್ಟೇ ಗಳಿದ್ದು, ಈಗಾಗಲೇ ವರ್ಷಾಂತ್ಯದ ಹಿನ್ನಲೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುವುದು ಸಹಜ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಯ ಹೋಂ ಸ್ಟೇ ಗಳಿಗೆ ಬರುವವರಿದ್ದು, ಅವರೆಲ್ಲರಿಗೂ ಗೂಡ್ಸ್ ರೈಲು ದಿಗ್ಬಂಧನ ವಿಧಿಸಿರುವುದರಿಂದ ಐದಾರು ಗಂಟೆಗಳಿಂದ ನಡು ರಸ್ತೆಯಲ್ಲಿ ಕಾಲ ಕಳೆಯುವಂತಾಯ್ತು.

ಕೊನೆಗೆ ರಾತ್ರಿ ಒಂದುವರೆ ಗಂಟೆಗೆ ಗೂಡ್ಸ್ ರೈಲಿನ ತಾಂತ್ರಿಕ ಸಮಸ್ಯೆ ಬಗೆಹರಿದ ನಂತರ ಸಂಚಾರ ಸಹಜ ಸ್ಥಿತಿಗೆ ಬಂದಿದೆ.

error: Content is protected !!