Thursday, January 1, 2026

ದಿನಭವಿಷ್ಯ: ಕೈಗೊಂಡ ಕಾರ್ಯ ಸಫಲ, ಮನೆಯಲ್ಲಿ, ವೃತ್ತಿಯಲ್ಲಿ ಖುಷಿಯ ವಾತಾವರಣ

ಮೇಷ
ಹರುಷದ ದಿನ. ಮನೆಯಲ್ಲಿ, ವೃತ್ತಿಯಲ್ಲಿ ಖುಷಿಯ ವಾತಾವರಣ. ಮಕ್ಕಳ ಜತೆ ತಾಳ್ಮೆಯಿಂದ ವ್ಯವಹರಿಸಿ. ಕೋಪತಾಪ ನಿಯಂತ್ರಿಸಿಕೊಳ್ಳಿ.
ವೃಷಭ
ಸಮಸ್ಯೆ ಬಗ್ಗೆ ಮುಕ್ತವಾಗಿ ಚಿಂತಿಸಿ. ನಿಮ್ಮ ಲೋಪವಿದ್ದರೆ ಸರಿ ಮಾಡಿಕೊಳ್ಳಿ. ಖರ್ಚು ಹೆಚ್ಚೀತು. ಆದರೆ ಅದು ಸಂತೋಷವೇ ತಂದೀತು.
ಮಿಥುನ
ಕೈಗೊಂಡ ಕಾರ್ಯ ಸಫಲ. ಸಮಸ್ಯೆಯನ್ನು ಜಾಣ್ಮೆಯಿಂದ ಪರಿಹರಿಸಿ. ಸಂಘರ್ಷ ತಪ್ಪಿಸಿ. ಹಳೆಯ ಕಹಿ ನೆನಪು ಮರೆತು ಮುಂದೆ ನೋಟ ಹರಿಸಿ.
ಕಟಕ
ಹಣ ಗಳಿಕೆಯ ಹಾದಿ ಸುಗಮ. ಉದ್ಯಮದಲ್ಲಿ ಯಶಸ್ಸು. ವೃತ್ತಿಯಲ್ಲಿ ಮೂಡಿದ್ದ ಕಿರಿಕಿರಿ ನಿವಾರಣೆ. ಮನೆಯವರ ಸಹಕಾರ, ಸಾಮರಸ್ಯ.
ಸಿಂಹ
ನಿಮಗೋ ಪೂರಕ ದಿನ. ಗುರಿ ಈಡೇರಿಕೆ. ಪ್ರೀತಿಪಾತ್ರರ ಜತೆ ಕಾಲಕ್ಷೇಪ. ಖರ್ಚು ಹೆಚ್ಚಿದರೂ ಹಣದ ಕೊರತೆ ಕಾಡದು. ಮಿತ್ರ ಸಂಗಮ.
ಕನ್ಯಾ
ವೃತ್ತಿಯಲ್ಲಿ ಪೂರಕ ಬೆಳವಣಿಗೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆಪ್ತರ ಜತೆ ಹರ್ಷದ ಕೂಟ. ಆದಾಯ ಹೆಚ್ಚಳ, ಖರ್ಚೂ ಅಧಿಕವೆ.
ತುಲಾ
ಒತ್ತಡದ ದಿನ. ಅದನ್ನು ಸಂಭಾಳಿಸುವುದೇ ಮುಖ್ಯವಾಗಲಿದೆ. ಆಪ್ತರ ಜತೆ ಭಿನ್ನಮತ ನಿವಾರಿಸಿ. ಸ್ನೇಹಿತರಿಂದ ಅನವಶ್ಯ ಕಿರಿಕಿರಿ ಉಂಟಾದೀತು.
ವೃಶ್ಚಿಕ
ಮುಖ್ಯ ಕೆಲಸ ಇಂದೇ ಪೂರೈಸಿಕೊಳ್ಳಿ. ನಾಳೆಗೆ ಬಾಕಿ ಇಡದಿರಿ. ಸಂಗಾತಿ ಜತೆಗೆ ಸಾಮರಸ್ಯ. ಆರ್ಥಿಕ ಗಳಿಕೆ ಹೆಚ್ಚಳ. ಬಂಧುಗಳ ನೆರವು.
ಧನು
ಅನವಶ್ಯ ಚಿಂತೆ ನಿಮ್ಮ ಕೆಲಸ ಕೆಡಿಸಬಹುದು. ಭಾವನೆ ನಿಯಂತ್ರಿಸಿ. ಕುಟುಂಬ ಸದಸ್ಯರ ಜತೆ ಕಾಲ ಕಳೆದು ಚಿಂತೆ ಮರೆಯಿರಿ.
ಮಕರ
ಕಠಿಣ ಶ್ರಮದ ಬಳಿಕವಷ್ಟೇ ಉತ್ತಮ ಫಲ ದೊರಕೀತು. ಸುಲಭ ದಾರಿ ಹುಡುಕುವುದು ವ್ಯರ್ಥ. ಅನವಶ್ಯ ವಾಗ್ವಾದದಲ್ಲಿ ತೊಡಗಬೇಡಿ.
ಕುಂಭ
ಏಕತಾನತೆ ಬಿಟ್ಟು ಹೊಸದರತ್ತ ಮುಖ ಮಾಡಿ. ಇದ್ದ ಹಣವೆಲ್ಲ ಖರ್ಚು ಮಾಡುವ ಬದಲು ಉಳಿತಾಯಕ್ಕೆ ಗಮನ ಕೊಡಿ.
ಮೀನ
ಖಾಸಗಿ ಬದುಕಲ್ಲಿ ಸಂವಹನದ ಕೊರತೆ. ಗೊಂದಲ ಏರ್ಪಡಬಹುದು. ಹಣದ ವ್ಯವಹಾರದಲ್ಲಿ ಜಾಗ್ರತೆ ವಹಿಸಿ. ಖರ್ಚು ಅಧಿಕ.

error: Content is protected !!