ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರುಷ 2026 ಆರಂಭವಾಗುತ್ತಿದ್ದಂತೆಯೇ ಸಿನಿಮಾ ಲೋಕದ ತಾರೆಯರು ತಮ್ಮ ಅಭಿಮಾನಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಪೋಸ್ಟ್, ಸ್ಟೋರಿ ಹಾಗೂ ಫೋಟೋಗಳ ಮೂಲಕ ಸೆಲೆಬ್ರಿಟಿಗಳು ಫ್ಯಾನ್ಸ್ ಜೊತೆ ಸಂಭ್ರಮ ಹಂಚಿಕೊಂಡಿದ್ದಾರೆ. ಈ ನಡುವೆ ಟಿವಿಕೆ ನಾಯಕ, ನಟ–ರಾಜಕಾರಣಿ ದಳಪತಿ ವಿಜಯ್ ಅವರ ಹೊಸ ವರ್ಷದ ವಿಶ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಗಮನ ಸೆಳೆದಿದೆ.
ವಿಜಯ್ ಅವರು ತಮ್ಮ ಫೋಟೋದೊಂದಿಗೆ ಹೊಸ ವರ್ಷದ ಸಂದೇಶ ಹಂಚಿಕೊಂಡಿದ್ದು, ಈ ಪೋಸ್ಟ್ ಕೇವಲ 8 ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಪೋಸ್ಟರ್‌ನಲ್ಲಿ “ಚೆನ್ನಾಗಿರುತ್ತೇವೆ, ಚೆನ್ನಾಗಿರುತ್ತೇವೆ, ಎಲ್ಲರೂ ಚೆನ್ನಾಗಿರುತ್ತೇವೆ” ಎಂಬ ಬರಹ ಇದ್ದು, ಮುನ್ನೆಲೆಯಲ್ಲಿ ವಿಜಯ್ ಅವರ ಚಿತ್ರ ಕಾಣಿಸುತ್ತದೆ. ಈ ಪೋಸ್ಟರ್ ಇದೀಗ ವೈರಲ್ ಆಗಿದೆ.
ಪೋಸ್ಟ್ ನೋಡಿದ ಅಭಿಮಾನಿಗಳು ಕಾಮೆಂಟ್ ಬಾಕ್ಸ್‌ನಲ್ಲಿ “ಹ್ಯಾಪಿ ನ್ಯೂ ಇಯರ್ ತಲೈವಾ” ಎಂದು ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ. ಹಲವರು ಪೋಸ್ಟರ್ ಅನ್ನು ಶೇರ್ ಮಾಡುವ ಮೂಲಕ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.
2026 ವರ್ಷ ವಿಜಯ್ ಅವರಿಗೆ ಮಹತ್ವದ ವರ್ಷವಾಗಲಿದೆ ಎನ್ನಲಾಗುತ್ತಿದೆ. ಈ ವರ್ಷ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದ್ದು, ಅವರ ರಾಜಕೀಯ ಭವಿಷ್ಯದ ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಮೂಡಿದೆ.

