ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷ 2026ರ ಸಂಭ್ರಮ ಮಂತ್ರಾಲಯದಲ್ಲಿ ಭಕ್ತಿ ಪರಾಕಾಷ್ಠೆ ತಲುಪಿದೆ. ಭಕ್ತರ ಪಾಲಿನ ಕಾಮಧೇನು, ಕಲ್ಪವೃಕ್ಷ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನಕ್ಕಾಗಿ ಮಂತ್ರಾಲಯಕ್ಕೆ ಭಕ್ತಸಾಗರವೇ ಹರಿದುಬಂದಿದೆ.
ವರ್ಷಾಂತ್ಯದ ರಜೆ ಹಾಗೂ ಹೊಸ ವರ್ಷದ ಆರಂಭದ ಹಿನ್ನೆಲೆಯಲ್ಲಿ ದೇಶದ ಮೂಲೆ ಮೂಲೆಗಳಿಂದ ಭಕ್ತರು ತುಂಗಾಭದ್ರಾ ತೀರಕ್ಕೆ ಆಗಮಿಸುತ್ತಿದ್ದಾರೆ. ಮೊದಲು ಪವಿತ್ರ ತುಂಗಾಭದ್ರಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಬಳಿಕ ರಾಯರ ವೃಂದಾವನ ದರ್ಶನ ಪಡೆದು ‘ರಾಯರೇ ಎಲ್ಲರಿಗೂ ಒಳಿತು ಮಾಡು’ ಎಂದು ಪ್ರಾರ್ಥಿಸುತ್ತಿದ್ದಾರೆ.
ಕ್ರಿಸ್‌ಮಸ್ ಹಾಗೂ ನ್ಯೂ ಇಯರ್ ವೆಕೇಷನ್ ಮೂಡ್‌ನಲ್ಲಿರುವ ಪ್ರವಾಸಿಗರು ಈ ಬಾರಿ ಆಧ್ಯಾತ್ಮಿಕ ಚಿಂತನೆಯೊಂದಿಗೆ ವರ್ಷವನ್ನು ಬರಮಾಡಿಕೊಳ್ಳಲು ಮಂತ್ರಾಲಯವನ್ನು ಆಯ್ದುಕೊಂಡಿದ್ದಾರೆ.

