ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೆನಾಡದ ವ್ಯಾಂಕೂವರ್ ನಲ್ಲಿ ಮದ್ಯಪಾನ ಮಾಡಿದ ಶಂಕೆ ಹಿನ್ನೆಲೆಯಲ್ಲಿ ಟೇಕ್‌ಆಫ್‌ಗೆ ಕೆಲವ ಕ್ಷಣಗಳ ಮುಂಚೆ ಏರ್ ಇಂಡಿಯ ಪೈಲಟ್‌ನನ್ನು ವಿಮಾನದಿಂದ ಕೆಳಗೆ ಇಳಿಸಿದ ಘಟನೆ ನಡೆದಿದೆ.
ಡಿಸೆಂಬರ್ 23ರಂದು ಈ ಘಟನೆ ನಡೆದಿದ್ದು, AI186 ಏರ್ ಇಂಡಿಯಾ ವಿಮಾನದ ಪೈಲಟ್ ಬಾಯಿಯಿಂದ ಮದ್ಯದ ವಾಸನೆ ಬಂರುತ್ತಿದೆ ಎಂಬ ಮಾಹಿತಿ ಪಡೆಯುತ್ತಿದ್ದಂತೆ ವಿಮಾನಯಾನ ಸಂಸ್ಥೆ ಈ ಕ್ರಮ ಕೈಗೊಂಡಿದೆ.
ಕೆನಡ ವಿಮಾನಯಾನ ಅಧಿಕಾರಿಗಳು ಟೇಕ್‌ಆಫ್‌ಗೂ ಮುನ್ನ ಪೈಲಟ್‌ನನ್ನು ವಿಮಾನದಿಂದ ಕೆಳಗಿಳಿಸಲಾಗಿದೆ. ಇದರಿಂದಾಗಿ ದೆಹಲಿಗೆ ತೆರಳಬೇಕಿದ್ದ ವಿಮಾನವು ವಿಳಂಬವಾಗಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.
ಏರ್ ಇಂಡಿಯಾ ಮಾಹಿತಿ ಪ್ರಕಾರ, ‘ಮದ್ಯದ ವಾಸನೆ’ ಬಂದ ಹಿನ್ನೆಲೆ ಪೈಲಟ್‌ನನ್ನು ವಿಮಾನದಿಂದ ಇಳಿಸಲಾಯಿತು. ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸಿದ್ದು, ಏರ್ ಇಂಡಿಯಾದಿಂದಲೂ ಆಂತರಿಕ ತನಿಖೆ ಆರಂಭವಾಗಿದೆ.
ಸುರಕ್ಷತಾ ನಿಯಮಾವಳಿಗಳ ಪ್ರಕಾರ, ವಿಮಾನವನ್ನು ನಡೆಸಲು ಪರ್ಯಾಯ ಪೈಲಟ್‌ರನ್ನು ನಿಯೋಜಿಸಲಾಯಿತು. ಬೇರೆ ಪೈಲಟ್‌ನನ್ನು ಗುರುತಿಸಿ ನಿಯೋಜಿಸುವ ಪ್ರಕ್ರಿಯೆಗೆ ಸಮಯ ತಗುಲಿದ್ದರಿಂದ ವಿಮಾನ ವಿಳಂಬವಾಗಿ ಹಾರಾಟ ಆರಂಭಿಸಿತು ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಯ ನಡುವೆಯೂ, ಟೇಕ್‌ಆಫ್‌ಗೆ ಮುನ್ನ ಎಲ್ಲ ಸುರಕ್ಷತಾ ಮಾನದಂಡಗಳು ಕೈಗೊಳ್ಳಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮಗಳು ಅಗತ್ಯವಾಗಿದ್ದವು ಎಂದು ಏರ್ ಇಂಡಿಯಾ ಪುನರುಚ್ಚರಿಸಿದೆ.
ವಿಮಾನ ಟೇಕ್ ಆಫ್ ವಿಳಂಬದಿಂದಾಗಿ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಏರ್ ಇಂಡಿಯಾ ವಿಷಾದ ವ್ಯಕ್ತಪಡಿಸುತ್ತದೆ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ವಿಳಂಬದ ಅವಧಿಯಲ್ಲಿ ಪ್ರಯಾಣಿಕರಿಗೆ ಉಪಹಾರ ಮತ್ತು ಅಗತ್ಯ ಸೌಕರ್ಯ ಒದಗಿಸಲಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಸುಖಕರ ಪ್ರಯಾಣವೇ ನಮ್ಮ ಮೊದಲ ಆದ್ಯತೆ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.
ಸ್ಯಾಂಪಲ್ ಪರೀಕ್ಷೆಯ ಫಲಿತಾಂಶ ಬರುವವರೆಗೆ, ಆ ಪೈಲಟ್‌ನನ್ನು ವಿಮಾನ ಹಾರಾಟ ಕರ್ತವ್ಯಗಳಿಂದ ಅಮಾನತು ಮಾಡಲಾಗಿದೆ. ಯಾವುದೇ ನಿಯಮಗಳು ಉಲ್ಲಂಘನೆಗೆ ಏರ್ ಇಂಡಿಯಾ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತದೆ. ನಿಯಮ ಉಲ್ಲಂಘನೆ ದೃಢಪಟ್ಟರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಏರ್ ಇಂಡಿಯಾ ಭರವಸೆ ನೀಡಿದೆ.

