ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಾತಿ, ಸಂಪತ್ತು ಹಾಗೂ ಭಾಷೆಯಂತಹ ವಿಭಜನೆಗಳನ್ನು ಮೀರಿ, ಎಲ್ಲರನ್ನು ನಮ್ಮವರೇ ಎಂದು ಕಾಣುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಛತ್ತೀಸ್‌ಗಢದ ರಾಯ್‌ಪುರ ಜಿಲ್ಲೆಯ ಸೋನ್‌ಪೈರಿ ಗ್ರಾಮದಲ್ಲಿ ನಡೆದ ಹಿಂದು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ತಾಯ್ನುಡಿಯನ್ನು ಮಾತನಾಡಬೇಕು ಹಾಗೂ ವಿವಿಧ ಭಾಷೆಗಳನ್ನು ಕಲಿಯಬೇಕು. ಏಕೆಂದರೆ ಎಲ್ಲ ಭಾಷೆಗಳೂ ಮಹತ್ವದ್ದೇ ಆಗಿದೆ ಎಂದು ತಿಳಿಸಿದರು.
ಭಾಷೆಯ ಮಹತ್ವವನ್ನು ಎತ್ತಿ ತೋರಿಸಿದ ಭಾಗವತ್, ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ತಮ್ಮ ಮಾತೃಭಾಷೆಯನ್ನು ಮಾತನಾಡಬೇಕು ಮತ್ತು ವಿಭಿನ್ನ ಭಾಷೆಗಳನ್ನು ಕಲಿಯಬೇಕು ಎಂದು ಒತ್ತಾಯಿಸಿದರು.
ಕನಿಷ್ಠ ಪಕ್ಷ ನಮ್ಮ ಮನೆಯಲ್ಲಿ ನಾವು ನಮ್ಮ ಮಾತೃ ಭಾಷೆಯಲ್ಲಿ ಮಾತನಾಡಬೇಕು. ನೀವು ಬೇರೆ ರಾಜ್ಯ ಅಥವಾ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ನೀವು ಆ ರಾಜ್ಯ ಅಥವಾ ಆ ಪ್ರದೇಶದ ಭಾಷೆಯನ್ನು ಕಲಿಯಬೇಕು. ಏಕೆಂದರೆ ಎಲ್ಲ ಭಾಷೆಗಳು ಭಾರತದ ರಾಷ್ಟ್ರೀಯ ಭಾಷೆಗಳಾಗಿವೆ. ಅವೆಲ್ಲವೂ ಸಮಾನ ಪ್ರಾಮುಖ್ಯತೆಯನ್ನು ಹೊಂದಿವೆ ಎಂದು ಹೇಳಿದರು.
ಕುಟುಂಬ ಸದಸ್ಯರು ವಾರದಲ್ಲಿ ಒಂದು ದಿನ ಊಟ, ಪ್ರಾರ್ಥನೆ ಮತ್ತು ಚರ್ಚೆಗಳಂತಹ ಸಾಮೂಹಿಕ ಚಟುವಟಿಕೆಗಳಿಗೆ ಮೀಸಲಿಡಬೇಕೆಂದು ಆರ್‌ಎಸ್‌ಎಸ್ ಮುಖ್ಯಸ್ಥರು ಕರೆ ನೀಡಿದರು.
ಇಡೀ ದೇಶ ಎಲ್ಲರಿಗೂ ಸೇರಿದ್ದು, ಇದುವೇ ನಿಜವಾದ ಸಾಮಾಜಿಕ ಸಾಮರಸ್ಯ. ಜನರು ಯಾರನ್ನೂ ಅವರ ಜಾತಿ, ಸಂಪತ್ತು, ಭಾಷೆ ಅಥವಾ ಪ್ರದೇಶದ ಆಧಾರದ ಮೇಲೆ ನಿರ್ಣಯಿಸಬಾರದು. ಎಲ್ಲರನ್ನೂ ತಮ್ಮವರೇ ಎಂದು ಪರಿಗಣಿಸಬೇಕು. ಇಡೀ ಭಾರತ ನಮ್ಮದು ಎಂದು ಅವರು ಹೇಳಿದರು. ಈ ವಿಧಾನವನ್ನು ಸಾಮಾಜಿಕ ಸಾಮರಸ್ಯ ಎಂದು ವಿವರಿಸಿದರು.
ಕುಟುಂಬಗಳು ವಾರದಲ್ಲಿ ಕನಿಷ್ಠ ಒಂದು ದಿನವನ್ನು ಒಟ್ಟಿಗೆ ಕಳೆಯಬೇಕು. ಅವರ ನಂಬಿಕೆಗೆ ಅನುಗುಣವಾಗಿ ಪ್ರಾರ್ಥನೆಗಳಲ್ಲಿ ತೊಡಗಬೇಕು. ಮನೆಯಲ್ಲೇ ಅಡುಗೆ ಮಾಡಿ ಒಟ್ಟಿಗೆ ಕುಳಿತು ಊಟ ಮಾಡಬೇಕು ಮತ್ತು ಅರ್ಥಪೂರ್ಣ ಚರ್ಚೆಗಳನ್ನು ನಡೆಸಬೇಕು ಎಂದು ಭಾಗವತ್ ಹೇಳಿದರು. ಚರ್ಚೆಗಳನ್ನು ಮಂಗಲ ಸಂವಾದ ಎಂದು ಅವರು ಕರೆದರು.

