Thursday, January 1, 2026

SHOCKING | ಸಚಿವರ ಕಾರು ಅಪಘಾತ: ರಸ್ತೆಗೆ ಅಡ್ಡ ಬಂದ ನಾಯಿಯ ಜೀವ ಉಳಿಸಲು ಹೋಗಿ ಆಕ್ಸಿಡೆಂಟ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಫತೇಬಾದ್ ರಸ್ತೆಯಲ್ಲಿ ಸಚಿವರ ಕಾರಿಗೆ ನಾಯಿ ಅಡ್ಡ ಬಂದಿದ್ದು, ಈ ವೇಳೆ ನಾಯಿ ಉಳಿಸಲು ಹೋದ ಕಾರಣ ಸಚಿವರ ಅಪಘಾತಕ್ಕೀಡಾದ ಘಟನೆ ನಡೆದಿದೆ.

ಉತ್ತರ ಪ್ರದೇಶದ ಸರ್ಕಾರದ ಸಚಿವ ಸಂಜಯ್ ನಿಶಾದ್ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಠವಶಾತ್ ಸಂಜಯ್ ನಿಶಾದ್ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಅಡ್ಡ ಬಂದ ನಾಯಿ ಜೀವ ಉಳಿಸಲು ಸಚಿವರ ಕಾರು ಚಾಲಕ ದಿಢೀರ್ ಬ್ರೇಕ್ ಹಾಕಿದ್ದಾರೆ. ಆದರೆ ವೇಗವಾಗಿ ಸಚಿವರ ಕಾರು ಹಾಗೂ ಬೆಂಗಾವಲು ಕಾರುಗಳು ಸಾಗುತ್ತಿದ್ದ ಕಾರಣ ಸಚಿವರ ಕಾರಿಗೆ ಹಿಂಬದಿಯಿಂದ ಬೇರೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

ಅತೀ ವೇಗದಲ್ಲಿದ್ದ ಕಾರಣ ಸಚಿವರ ಕಾರಿನ ಹಿಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ. ಬೆಂಗಾವಲು ಕಾರಿನ ಮುಂಭಾಗವೂ ಪುಡಿ ಪುಡಿಯಾಗಿದೆ. ಈ ಅಪಘಾತದಲ್ಲಿ ಸಚಿವರ ಸಂಜಯ್ ನಿಶಾದ್ ಹಾಗೂ ಬೆಂಗಾವಲು ವಾಹನದಲ್ಲಿದ್ದ ಭದ್ರತಾ ಸಿಬ್ಬಂದಿಗಳು ಅಪಾಯದಿಂದ ಪಾರಾಗಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮುವಿನಿಂದ ಶೌರ್ಯ ಪ್ರಶಸ್ತಿ ಪಡೆದ ಅಜಯ್ ರಾವ್ ಜೊತೆ ಸಚಿವ ಸಂಜಯ್ ರಾವ್ ಫತೇಬಾದ್‌ನಿಂದ ಆಗ್ರಾ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆಯಿಂದ ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ಅಪಘಾತದಲ್ಲಿ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಇದೇ ವೇಳೆ ಕೆಲ ಹೊತ್ತು ಟ್ರಾಫಿಕ್ ಜಾಮ್ ಸಂಭವಿಸಿದೆ.

error: Content is protected !!