Thursday, January 1, 2026

10 ವರ್ಷದಿಂದ ಪೂಜೆ, ಪುನಸ್ಕಾರ ಮಾಡಿ ಹುಟ್ಟಿದ್ದ ಕಂದಮ್ಮ ಕಲುಷಿತ ನೀರು ಸೇವಿಸಿ ಸಾವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

10 ವರ್ಷದಿಂದ ಮಗು ಬೇಕೆಂದು ಪ್ರಾರ್ಥಿಸಿದ ನಂತರ ಜನಿಸಿದ್ದ ಪುಟಾಣಿಯೊಂದು ಆರು ತಿಂಗಳಲ್ಲೇ ಪ್ರಾಣಬಿಟ್ಟಿದೆ. ಮಗು ಕಲುಷಿತ ನೀರು ಸೇವನೆಯಿಂದ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ಮರಾಠಿ ಮೊಹಲ್ಲಾದಲ್ಲಿನ ಆರು ತಿಂಗಳ ಮಗು ಸಾವನ್ನಪ್ಪಿದೆ. ಈ ಮೂಲಕ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, 1000ಕ್ಕೂ ಅಧಿಕ ಜನರು ಅಸ್ವಸ್ಥರಾಗಿದ್ದಾರೆ. ಇನ್ನೂ 200ಕ್ಕೂ ಅಧಿಕ ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಕುರಿತು ಮಗುವಿನ ತಾಯಿ ಸಾಧನಾ ಸಾಹು ಮಾತನಾಡಿ, ಮನೆಗೆ ಪೂರೈಕೆಯಾಗುವ ನೀರನ್ನು ಹಾಲಿಗೆ ಮಿಶ್ರಣ ಮಾಡಿ, ಕುಡಿಸಿದ ಬಳಿಕ ಮಗುವಿಗೆ ವಾಂತಿಯಾಗಲು ಶುರುವಾಗಿ ಅಸ್ವಸ್ಥಗೊಂಡಿತು. ಕೂಡಲೇ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು, ಬಳಿಕ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ಮಗು ಸಾವನ್ನಪ್ಪಿದೆ ಎಂದು ತಿಳಿಸಿದರು ಎಂದಿದ್ದಾರೆ.

ಹತ್ತು ವರ್ಷಗಳ ಪ್ರಾರ್ಥನೆಯ ನಂತರ ಮಗು ಜನಿಸಿತ್ತು. ಆದರೆ ಈಗ ಈ ನೀರಿನಿಂದಾಗಿ ನನ್ನ ಮಗುವನ್ನು ಕಳೆದುಕೊಂಡೆ. ಈ ಸಂಬಂಧ ಹಲವು ಬಾರಿ ದೂರು ನೀಡಿದರೂ ಕೂಡ ಯಾವುದೇ ಬದಲಾವಣೆಯಾಗಿಲ್ಲ. ಅದೇ ಕೊಳಕು ನೀರು ಬರುತ್ತಿದೆ. ಅಲ್ಲದೇ ಇದೀಗ ನನ್ನ 10 ವರ್ಷದ ಮಗಳು ಕೂಡ ಹೊಟ್ಟೆನೋವಿನಿಂದ ಬಳಲುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ.

error: Content is protected !!