Monday, November 10, 2025

ಭಕ್ತಾದಿಗಳಿಗೆ ಶುಭಸುದ್ದಿ: ಶಬರಿಮಲೆ ಯಾತ್ರೆಗೆ ಶ್ರೀಲಂಕಾ ಸರ್ಕಾರದಿಂದಲೂ ಮಾನ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಶ್ರೀಲಂಕಾ ಪ್ರಜೆಗಳು ವಾರ್ಷಿಕ ತೀರ್ಥಯಾತ್ರೆ ಕೈಗೊಳ್ಳಬಹುದು ಎಂದು ಶ್ರೀಲಂಕಾ ಸರ್ಕಾರ ನಿರ್ಧರಿಸಿದೆ.

ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಶ್ರೀಲಂಕಾದ ಭಕ್ತಾದಿಗಳು ಶಬರಿಮಲೆ ಅಯ್ಯಪ್ಪನನ್ನು ಪೂಜಿಸುತ್ತಾರೆ. ಅದಲ್ಲದೇ ಪ್ರತಿ ವರ್ಷ ಸುಮಾರು 15 ಸಾವಿರಕ್ಕೂ ಅಧಿಕ ಶೀಲಂಕಾ ಪ್ರಜೆಗಳು ಶಬರಿಮಲೆ ದೇಗುಲಕ್ಕೆ ಭೇಟಿ ನೀಡುತ್ತಾರೆ. ಹೀಗಾಗಿ ಶ್ರೀಲಂಕಾ ಸರ್ಕಾರ ಶಬರಿಮಲೆ ಯಾತ್ರೆಯನ್ನು ಸರ್ಕಾರದ ಮಾನ್ಯತೆ ಪಡೆದ ಯಾತ್ರೆ ಎಂದು ಪರಿಗಣಿಸಿದೆ.

ಶಬರಿಮಲೆ ಅಯ್ಯಪ್ಪನ ದೇಗುಲದಲ್ಲಿ ವಾರ್ಷಿಕ ಮಂಡಲ ಪೂಜೆ ಉತ್ಸವವು ನವೆಂಬರ್‌ನಿಂದ ಡಿಸೆಂಬರ್‌ವರೆಗೆ ನಡೆಯುತ್ತದೆ. ಬಳಿಕ ಜನವರಿಯಲ್ಲಿ ಮಕರವಿಳಕ್ಕು ಉತ್ಸವ ನಡೆಯುತ್ತದೆ. ಈ ಅವಧಿಯಲ್ಲಿ ಭಕ್ತರು ಶಬರಿಮಲೆ ಯಾತ್ರೆ ಕೈಗೊಳ್ಳುತ್ತಾರೆ.

error: Content is protected !!