August 12, 2026
Wednesday, August 12, 2026
spot_img

ಗ್ರಾಹಕನಿಗೆ ಬಿಗ್‌ ಶಾಕ್‌! ಬೇಕರಿಯಿಂದ ಖರೀದಿಸಿದ ಪಫ್‌ನಲ್ಲಿ ಹಾವು ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬೇಕರಿಯಿಂದ ಖರೀದಿಸಿದ್ದ ಕರ್ರಿ ಪಪ್ಸ್‌ನಲ್ಲಿ ಹಾವು ಪತ್ತೆಯಾಗಿರುವ ಘಟನೆ ತೆಲಂಗಾಣದ ಮೆಹಬೂಬ್ ನಗರದಲ್ಲಿ ನಡೆದಿದೆ.

ಶ್ರೀಶೈಲ ಎಂಬ ಮಹಿಳೆ ಜಡ್ಚರ್ಲಾ ಪುರಸಭೆಯಲ್ಲಿರುವ ಅಯ್ಯಂಗಾರ್ ಬೇಕರಿಯಿಂದ ಎಗ್ ಪಪ್ಸ್ ಹಾಗೂ ಕರ‍್ರಿ ಪಪ್ಸ್ ಖರೀದಿಸಿದ್ದರು. ಅಲ್ಲಿಂದ ಮನೆಗೆ ಬಂದ ಮಹಿಳೆ ತಮ್ಮ ಮಕ್ಕಳೊಂದಿಗೆ ತಿನ್ನಲು ಕುಳಿತರು. ಈ ವೇಳೆ ರ‍್ರಿ ಪಪ್ಸ್ ತೆರೆದಾಗ ಅದರಲ್ಲಿ ಹಾವು ಇರುವುದು ಪತ್ತೆಯಾಗಿದೆ.

ಕೂಡಲೇ ಮಹಿಳೆ ಈ ಕುರಿತು ಬೇಕರಿ ಮಾಲೀಕರಿಗೆ ಮಾಹಿತಿ ತಿಳಿಸಿದ್ದು, ಅವರು ಬೇಜವ್ದಾರಿಯಿಂದ ವರ್ತಿಸಿದ್ದಾರೆ. ಜೊತೆಗೆ ಇಲ್ಲಸಲ್ಲದ ಕಾರಣ ಹೇಳಿದರು. ಇದರಿಂದ ಕೋಪಗೊಂಡ ಮಹಿಳೆ ಹಾಗೂ ಆಕೆಯ ಕುಟುಂಬಸ್ಥರು ಈ ಕುರಿತು ಜಡ್ಚರ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !