ತಲೆಹೊಟ್ಟು ಸಮಸ್ಯೆ ಇಂದಿನ ದಿನಗಳಲ್ಲಿ ಬಹುತೇಕ ಎಲ್ಲರನ್ನೂ ಕಾಡುತ್ತಿದೆ. ಹವಾಮಾನ ಬದಲಾವಣೆ, ಒತ್ತಡ, ಆಹಾರ ಪದ್ಧತಿ ಮತ್ತು ರಾಸಾಯನಿಕ ಉತ್ಪನ್ನಗಳ ಬಳಕೆ ಇದಕ್ಕೆ ಪ್ರಮುಖ ಕಾರಣಗಳು. ತಲೆಹೊಟ್ಟು ಹೋಗಲಾಡಿಸಲು ದುಬಾರಿ ಶಾಂಪೂಗಳು ಅಥವಾ ಟ್ರೀಟ್ಮೆಂಟ್‌ಗಳ ಅವಶ್ಯಕತೆ ಇಲ್ಲ. ನಮ್ಮ ಅಡುಗೆಮನೆಯಲ್ಲೇ ಸಿಗುವ ನಿಂಬೆಹಣ್ಣು ಈ ಸಮಸ್ಯೆಗೆ ಪರಿಣಾಮಕಾರಿ, ಸುರಕ್ಷಿತ ಹಾಗೂ ಕಡಿಮೆ ವೆಚ್ಚದ ಪರಿಹಾರ ನೀಡುತ್ತದೆ. ನಿಂಬೆಹಣ್ಣಿನಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಗುಣಗಳು ತಲೆಚರ್ಮವನ್ನು ಶುದ್ಧಗೊಳಿಸಿ ತಲೆಹೊಟ್ಟನ್ನು ಕಡಿಮೆ ಮಾಡುತ್ತವೆ.
- ನಿಂಬೆ ಮತ್ತು ಅಲೋವೆರಾ ಪ್ಯಾಕ್: ನಿಂಬೆ ರಸಕ್ಕೆ ಅಲೋವೆರಾ ಜೆಲ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಕೂದಲಿನ ಬೇರುಗಳಿಂದ ತುದಿಯವರೆಗೆ ಹಚ್ಚಿ ಒಣಗಲು ಬಿಡಿ. ಬಳಿಕ ಸಾಮಾನ್ಯ ಶಾಂಪೂ ಬಳಸಿ ತೊಳೆಯಿರಿ. ಇದು ತಲೆಚರ್ಮದ ಉರಿ ಹಾಗೂ ಒಣತನವನ್ನು ಕಡಿಮೆ ಮಾಡುತ್ತದೆ.
- ನಿಂಬೆ ಮತ್ತು ಎಣ್ಣೆಯ ಸಂಯೋಜನೆ: ಕ್ಯಾಸ್ಟರ್ ಆಯಿಲ್ ಅಥವಾ ತೆಂಗಿನ ಎಣ್ಣೆಗೆ ನಿಂಬೆ ರಸ ಸೇರಿಸಿ ತಲೆಚರ್ಮಕ್ಕೆ ಮಸಾಜ್ ಮಾಡಿ. ಸ್ನಾನದ ಮೊದಲು ಹಚ್ಚಿದರೆ ತಲೆಹೊಟ್ಟು ನಿಧಾನವಾಗಿ ಕಡಿಮೆಯಾಗುತ್ತದೆ.
- ಗ್ರೀನ್ ಟೀ–ನಿಂಬೆ ಪ್ಯಾಕ್: ಗ್ರೀನ್ ಟೀಯಲ್ಲಿ ನಿಂಬೆ ರಸ ಬೆರೆಸಿ ಕೂದಲಿಗೆ ಹಚ್ಚಿದರೆ ತಲೆಚರ್ಮ ತಂಪಾಗುತ್ತದೆ ಮತ್ತು ತಲೆಹೊಟ್ಟು ನಿಯಂತ್ರಣಕ್ಕೆ ಬರುತ್ತದೆ.
- ಮೆಂತ್ಯ–ನಿಂಬೆ ಮಿಶ್ರಣ: ನೆನೆಸಿದ ಮೆಂತ್ಯ ಬೀಜಗಳನ್ನು ರುಬ್ಬಿ ನಿಂಬೆ ರಸ ಸೇರಿಸಿ ಹಚ್ಚಿದರೆ ತಲೆಹೊಟ್ಟು ಹಾಗೂ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ.
- ಆಲಿವ್ ಎಣ್ಣೆ ಮತ್ತು ನಿಂಬೆ: ಆಲಿವ್ ಎಣ್ಣೆಗೆ ನಿಂಬೆ ರಸ ಸೇರಿಸಿ ವಾರಕ್ಕೆ ಮೂರು ಬಾರಿ ಬಳಸಿ. ಇದು ತಲೆಹೊಟ್ಟನ್ನು ಹೋಗಲಾಡಿಸಿ ಕೂದಲಿಗೆ ಹೊಳಪು ನೀಡುತ್ತದೆ.

