Friday, January 2, 2026

Gold Rate | ಗಗನಕ್ಕೇರಿದ ಚಿನ್ನ-ಬೆಳ್ಳಿ ಬೆಲೆ: ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ ‘ಹಳದಿ ಲೋಹ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಅಬ್ಬರ ಮುಂದುವರಿದಿದೆ. ಶುಕ್ರವಾರ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಮ್‌ಗೆ ಭಾರಿ 105 ರೂ. ಏರಿಕೆಯಾಗುವ ಮೂಲಕ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ವಿದೇಶಿ ಮಾರುಕಟ್ಟೆಗಳಲ್ಲಿ ಬೆಲೆ ಇಳಿಕೆಯ ಪ್ರವೃತ್ತಿ ಕಂಡುಬಂದರೂ, ಭಾರತದಲ್ಲಿ ಮಾತ್ರ ಚಿನ್ನ ಮತ್ತು ಬೆಳ್ಳಿಯ ದರಗಳು ರಾಕೆಟ್ ವೇಗದಲ್ಲಿ ಏರುತ್ತಿವೆ.

ಇಂದಿನ ಏರಿಕೆಯ ಬಳಿಕ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಮ್‌ಗೆ 1,24,850 ರೂ. ತಲುಪಿದೆ. ಇನ್ನು ಅತ್ಯಂತ ಶುದ್ಧವಾದ 24 ಕ್ಯಾರೆಟ್ (ಅಪರಂಜಿ) ಚಿನ್ನದ ಬೆಲೆ 1,36,200 ರೂ. ಗಡಿ ದಾಟುವ ಮೂಲಕ ದಾಖಲೆ ಬರೆದಿದೆ.

ಚಿನ್ನದ ಹಾದಿಯಲ್ಲೇ ಸಾಗಿರುವ ಬೆಳ್ಳಿಯ ದರ ಇಂದು ಪ್ರತಿ ಗ್ರಾಮ್‌ಗೆ 4 ರೂ. ಹೆಚ್ಚಳವಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ 100 ಗ್ರಾಮ್ ಬೆಳ್ಳಿಯ ಬೆಲೆ 24,200 ರೂ. ಆಗಿದೆ. ಗಮನಾರ್ಹ ಸಂಗತಿಯೆಂದರೆ, ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ ಬೆಳ್ಳಿಯ ಬೆಲೆ 100 ಗ್ರಾಮ್‌ಗೆ 26,000 ರೂ. ವರೆಗೂ ತಲುಪಿದೆ.

ಚಿನ್ನ (ಬೆಂಗಳೂರು): 1,24,850 ರೂ. (22 ಕ್ಯಾರೆಟ್)

ಬೆಳ್ಳಿ (ಬೆಂಗಳೂರು): 24,200 ರೂ. (100 ಗ್ರಾಮ್‌ಗೆ)

ಜಾಗತಿಕ ಮಟ್ಟದಲ್ಲಿ ಬೆಲೆ ಕುಸಿತವಿದ್ದರೂ, ಸ್ಥಳೀಯ ಬೇಡಿಕೆ ಮತ್ತು ಆಮದು ಸುಂಕದಂತಹ ಕಾರಣಗಳಿಂದಾಗಿ ಭಾರತದಲ್ಲಿ ಬೆಲೆ ಏರಿಕೆ ಮುಂದುವರಿದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

error: Content is protected !!