Monday, January 5, 2026

ದೇವರನ್ನೇ ಒಪ್ಪದ ಜಾವೇದ್ ಅಖ್ತರ್ ದಿಢೀರ್ ಟೋಪಿ ಧರಿಸಿ ನಮಾಜ್ ಮಾಡಿದ್ರಾ? ವೈರಲ್ ವಿಡಿಯೋ ಅಸಲಿಯತ್ತೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಹಿರಿಯ ಚಿತ್ರಕಥೆಗಾರ, ಸಾಹಿತಿ ಜಾವೇದ್ ಅಖ್ತರ್ ಅವರು ದೇವರ ಮೇಲೆ ನಂಬಿಕೆ ಹೊಂದಿಲ್ಲ. ದೇವರ ಅಸ್ತಿತ್ವವನ್ನು ಅವರು ಒಪ್ಪುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಅವರು ಈಗಾಗಲೇ ಅನೇಕ ಸಂದರ್ಭಗಳಲ್ಲಿ ಮಾತನಾಡಿದ್ದಾರೆ. ಆದರೆ ಈಗ ಅವರು ತಮ್ಮ ಅಭಿಪ್ರಾಯ ಬದಲಾಯಿಸಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿದೆ. ಟೋಪಿ ಧರಿಸಿ ನಮಾಜ್ ಕೂಡ ಮಾಡಲು ಆರಂಭಿಸಿದ್ದಾರೆ ಎಂದು ಅಂತೆ-ಕಂತೆ ಹಬ್ಬಿಸಲಾಗಿದೆ.

ಇದೀಗ ಇದರ ವಿರುದ್ಧ ಜಾವೇದ್ ಅಖ್ತರ್ ಗರಂ ಆಗಿದ್ದಾರೆ.

ಒಂದು ವಿಡಿಯೋ ಲಿಂಕ್ ಆಗಿದ್ದು, ಅದರಲ್ಲಿ ತಲೆಗೆ ಮುಸ್ಲಿಂ ಟೋಪಿ ಹಾಕಿಕೊಂಡಿರುವ ಚಿತ್ರ ಇದೆ. ‘ಜಾವೇದ್ ಅಖ್ತರ್ ಅವರು ಪೂರ್ತಿಯಾಗಿ ಇಸ್ಲಾಂ ಧರ್ಮವನ್ನು ಒಪ್ಪಿಕೊಂಡಿದ್ದಾರೆ. ಅಲ್ಲಾ ಇರುವುದನ್ನು ಒಪ್ಪಿಕೊಂಡು, ತಲೆ ಮೇಲೆ ಟೋಪಿ ಹಾಕಿಕೊಂಡು, ನಮಾಜ್ ಮಾಡಲು ಮಸೀದಿಗೆ ಹೋಗಿದ್ದಾರೆ. ಅವರೀಗ ಪಕ್ಕಾ ಮುಸಲ್ಮಾನ ಆಗಿದ್ದಾರೆ’ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.

ಈ ವದಂತಿಯ ವಿರುದ್ಧ ಜಾವೇದ್ ಅಖ್ತರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಥ ಎಐ ಫೋಟೋ ಮತ್ತು ಸುಳ್ಳು ಸುದ್ದಿಯನ್ನು ಹಬ್ಬಿಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಅವರು ಹೇಳಿದ್ದಾರೆ. ವಿಡಿಯೋ ಫಾರ್ವರ್ಡ್ ಮಾಡಿದವರಿಗೂ ಕಾನೂನಿನ ಮೂಲಕ ಪಾಠ ಕಲಿಸುವುದಾಗಿ ಜಾವೇದ್ ಅಖ್ತರ್ ಅವರು ಎಚ್ಚರಿಕೆ ನೀಡಿದ್ದಾರೆ.

ನಾನು ಟೋಪಿ ಧರಿಸಿರುವ ನಕಲಿ ಫೋಟೋವನ್ನು ವೈರಲ್ ಮಾಡಲಾಗುತ್ತಿದೆ. ದೇವರನ್ನು ನಾನು ಒಪ್ಪಿಕೊಂಡಿದ್ದೇನೆ ಎಂದು ಸುದ್ದಿ ಹಬ್ಬಿಸಲಾಗಿದೆ. ಇದೆಲ್ಲ ಸುಳ್ಳು. ಸೈಬರ್ ಪೊಲೀಸರಿಗೆ ದೂರು ನೀಡಲು ತೀರ್ಮಾನಿಸುತ್ತಿದ್ದೇನೆ. ಈ ಸುಳ್ಳು ಸುದ್ದಿಗೆ ಕಾರಣ ಆದ ವ್ಯಕ್ತಿಯನ್ನು ಹಿಡಿಯುತ್ತೇವೆ. ಇದರಿಂದ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗಿದೆ ಎಂದು ಜಾವೇದ್ ಅಖ್ತರ್ ಅವರು ಪೋಸ್ಟ್ ಮಾಡಿದ್ದಾರೆ.

error: Content is protected !!