ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿನ ರಾಜಕೀಯ ಅಸ್ಥಿರತೆ ಮತ್ತು ಹಿಂಸಾಚಾರದ ನಡುವೆ ಐಪಿಎಲ್ನಲ್ಲಿ ಬಾಂಗ್ಲಾದೇಶದ ಆಟಗಾರರನ್ನು ಖರೀದಿಸಿದ್ದಕ್ಕಾಗಿ ಕೆಕೆಆರ್ ಮಾಲೀಕ ಶಾರುಖ್ ಖಾನ್ ತೀವ್ರ ವಿವಾದಕ್ಕೆ ಸಿಲುಕಿದ್ದಾರೆ. ಜಗದ್ಗುರು ರಾಮಭದ್ರಾಚಾರ್ಯ ಸೇರಿದಂತೆ ಹಲವರು ದೇಶದ್ರೋಹಿ ಎಂದು ಕರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ಯಾವುದಾದರೂ ಘಟನೆಗಳು ಸಂಭವಿಸಿದಾಗ ಸ್ಟಾರ್ ನಟರು ರಿಯಾಕ್ಟ್ ಮಾಡುವುದು ಸಹಜ. ಆದರೆ, ಪಾಕಿಸ್ತಾನ, ಬಾಂಗ್ಲಾದೇಶದಂಥ ಮುಸ್ಲಿಂ ರಾಷ್ಟ್ರಗಳು ಭಯೋತ್ಪಾದನೆಯಲ್ಲಿ ತೊಡಗಿದರೂ, ಮೌನವಾಗಿರುತ್ತಾರೆ ಎಂದು ಟೀಕೆಗಳು ವ್ಯಕ್ತವಾಗುತ್ತಿದೆ.
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಹಿಂದುಗಳ ಮಾರಣ ಹೋಮ ಮಾಡ್ತಿರೋ ಬಾಂಗ್ಲಾದೇಶ ಆಟಗಾರರನ್ನು ಖರೀದಿಸಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಜಾಲತಾಣದಲ್ಲಿ ಇದಾಗಲೇ ಶಾರುಖ್ ವಿರುದ್ಧ ಅಸಮಾಧಾನದ ಹೊಗೆಯಾಡುತ್ತಿದೆ.ಹಲವು ದಿಗ್ಗಜರು, ದೇಶಭಕ್ತರು ಛೀಮಾರಿ ಹಾಕುತ್ತಿದ್ದಾರೆ.
ಜಗದ್ಗುರು ರಾಮಭದ್ರಾಚಾರ್ಯ ಹೇಳಿದ್ದೇನು?
ಇದೀಗ ಜಗದ್ಗುರು ರಾಮಭದ್ರಾಚಾರ್ಯ ಅವರು ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾರುಖ್ ಖಾನ್ ಚರಿತ್ರೆ ಏನಿದೆ? ಅವರಿಗೆ ಚರಿತ್ರೆನೇ ಇಲ್ಲ. ಅವರೊಬ್ಬ ದೇಶದ್ರೋಹಿ, ಇದನ್ನು ಪದೇ ಪದೇ ಸಾಬೀತು ಮಾಡುತ್ತಿದ್ದಾರೆ. ಆತ ಸೂಪರ್ ಸ್ಟಾರ್ ಅಲ್ಲ ಎಂದಿದ್ದಾರೆ . ಕಥಾವಾಚಕ್ ದೇವಕಿನಂದನ್ ಠಾಕೂರ್ ಕೂಡ ಶಾರುಖ್ ಖಾನ್ ವಿರುದ್ಧ ಹರಿಹಾಯ್ದಿದ್ದಾರೆ.
ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು, ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡರು ಶಾರುಖ್ಗೆ ಛೀಮಾರಿ ಹಾಕುತ್ತಿದ್ದಾರೆ. ಭಾರತದ ಮೇಲೆ ಭಯೋತ್ಪಾದನಾ ಕೃತ್ಯ ಸಾರುವ, ಹಿಂದೂಗಳ ಮಾರಣ ಹೋಮ ಮಾಡುವ ಮುಸ್ಲಿಂ ರಾಷ್ಟ್ರಗಳ ಮೇಲೆ ಇಂಥವರ ಪ್ರೀತಿ ಸದಾ ಇರುತ್ತದೆ, ಅದರಲ್ಲಿ ಹೊಸ ವಿಷಯವೇನೂ ಇಲ್ಲ ಎನ್ನುತ್ತಿದ್ದಾರೆ.
ಸಿನಿಮಾಗಳಲ್ಲಿ ದುಡ್ಡು ಮಾಡುವ ದಂಧೆ ಮಾಡಿಕೊಂಡಿರುವ ಕೆಲವು ನಟರು ಇದ್ದಾರೆ. ಅವರು ದೇಶಪ್ರೇಮ ಮೆರೆದು ನಟಿಸಿದರೆ ಅದನ್ನು ಹಾಡಿ ಹೊಗಳಿ ಅವರನ್ನೇ ತಮ್ಮ ದೇವರು ಎಂದುಕೊಳ್ಳುವ ದೊಡ್ಡ ಅಭಿಮಾನಿ ವರ್ಗಕ್ಕೆ ಸಮಯ ಬಂದಾಗ ಇಂಥ ನಟರ ಬಂಡವಾಳ ತಿಳಿಯುತ್ತದೆ. ಆದರೆ ಅದನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿ ಅಭಿಮಾನದ ಗುಂಗಿನಲ್ಲಿ ಇರುವ ಭಾರತೀಯರಿಗೆ ಅರ್ಥವಾಗುವುದಿಲ್ಲ ಎಂದು ಕೆಲವರು ಜಾಲತಾಣದಲ್ಲಿ ತೀಕ್ಷ್ಮವಾದ ಕಮೆಂಟ್ ಹಾಕುತ್ತಿದ್ದಾರೆ.

