Monday, January 5, 2026

ಟೀಮ್ ಇಂಡಿಯಾ ಮಹಿಳಾ ತಂಡಕ್ಕೆ ಫಿಟ್‌ನೆಸ್ ಬಲ: ಹೊಸ ಸ್ಟ್ರೆಂಥ್ ಕೋಚ್ ನೇಮಕಕ್ಕೆ BCCI ನಿರ್ಧಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

2025ರಲ್ಲಿ ಐತಿಹಾಸಿಕ ಏಕದಿನ ವಿಶ್ವಕಪ್ ಗೆಲುವಿನ ಬಳಿಕ ಭಾರತದ ಮಹಿಳಾ ಕ್ರಿಕೆಟ್ ತಂಡ ಈಗ 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಗೆ ಸಿದ್ಧತೆ ಆರಂಭಿಸಿದೆ. ಈ ಮಹತ್ವದ ಟೂರ್ನಿಯ ಮುನ್ನ ತಂಡವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಉದ್ದೇಶದಿಂದ ಬಿಸಿಸಿಐ ಹೊಸ ಸ್ಟ್ರೆಂಥ್ ಮತ್ತು ಕಂಡೀಷನಿಂಗ್ ಕೋಚ್ ನೇಮಕ ಮಾಡುವ ತೀರ್ಮಾನಕ್ಕೆ ಬಂದಿದೆ.

ಲಭ್ಯವಿರುವ ಮಾಹಿತಿಯಂತೆ, ಇಂಗ್ಲೆಂಡ್‌ನ ಮಾಜಿ ಅನುಭವಿ ಕ್ರಿಕೆಟಿಗ ನಿಕೋಲಸ್ ಲೀ ಈ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಾಧ್ಯತೆ ಇದೆ. 2026ರ ಮಹಿಳಾ ಪ್ರೀಮಿಯರ್ ಲೀಗ್ ಮುಗಿದ ಬಳಿಕ ಲೀ ತಂಡವನ್ನು ಸೇರ್ಪಡೆಯಾಗಲಿದ್ದಾರೆ ಎಂದು ವರದಿಯಾಗಿದೆ.

ಈ ವರ್ಷದ WPL ಜನವರಿ 9ರಿಂದ ಫೆಬ್ರವರಿ 5ರವರೆಗೆ ನಡೆಯಲಿದ್ದು, ತಕ್ಷಣವೇ ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಫೆಬ್ರವರಿ 15ರಿಂದ ಮಾರ್ಚ್ 9ರವರೆಗೆ ವಿವಿಧ ಸ್ವರೂಪಗಳ ಸರಣಿಗಳು ಅಲ್ಲಿ ನಡೆಯಲಿವೆ. ಪಿಟಿಐ ವರದಿಯ ಪ್ರಕಾರ, WPL ನಂತರ ಲೀ ಅಧಿಕೃತವಾಗಿ ಭಾರತೀಯ ಮಹಿಳಾ ತಂಡದ ಸ್ಟ್ರೆಂಥ್ ಮತ್ತು ಕಂಡೀಷನಿಂಗ್ ಕೋಚ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ನಿಕೋಲಸ್ ಲೀ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೀರ್ಘ ಅನುಭವವಿದೆ. ಅವರು ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗರಾಗಿದ್ದು 13 ಪಂದ್ಯಗಳಲ್ಲಿ 490 ರನ್ ಗಳಿಸಿದ್ದಾರೆ. ಇತ್ತೀಚೆಗೆ ಯುಎಇಯ ಐಎಲ್‌ಟಿ20 ಲೀಗ್‌ನಲ್ಲಿ ಗಲ್ಫ್ ಜೈಂಟ್ಸ್ ತಂಡದೊಂದಿಗೆ ಕೆಲಸ ಮಾಡಿದ ಲೀ, ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳ ಸ್ಟ್ರೆಂಥ್ ಮತ್ತು ಕಂಡೀಷನಿಂಗ್ ಕೋಚ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

error: Content is protected !!