Sunday, January 11, 2026

ನಾಲ್ಕು ಇನ್ನಿಂಗ್ಸ್, ನಾಲ್ಕು ಸೆಂಚುರಿ: ವಿಜಯ್ ಹಜಾರೆ ಟ್ರೋಫಿಯಲ್ಲಿ ಕನ್ನಡಿಗನ ಅಬ್ಬರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶೀಯ ಕ್ರಿಕೆಟ್‌ನ ಪ್ರತಿಷ್ಠಿತ ಏಕದಿನ ಟೂರ್ನಿ ‘ವಿಜಯ್ ಹಜಾರೆ ಟ್ರೋಫಿ’ಯಲ್ಲಿ ಕರ್ನಾಟಕದ ಸ್ಟಾರ್ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ತಮ್ಮ ಬ್ಯಾಟಿಂಗ್ ಪರಾಕ್ರಮ ಮುಂದುವರಿಸಿದ್ದಾರೆ. ತ್ರಿಪುರ ವಿರುದ್ಧ ನಡೆದ 5ನೇ ಸುತ್ತಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಪಡಿಕ್ಕಲ್ ಹಲವು ದಾಖಲೆಗಳನ್ನು ಪುಡಿಪುಡಿ ಮಾಡಿದ್ದಾರೆ.

ಪ್ರಸಕ್ತ ಆವೃತ್ತಿಯಲ್ಲಿ ಪಡಿಕ್ಕಲ್ ಫಾರ್ಮ್ ಕಂಡು ಕ್ರಿಕೆಟ್ ಲೋಕವೇ ಬೆರಗಾಗಿದೆ. ಆಡಿದ ಐದು ಪಂದ್ಯಗಳ ಪೈಕಿ ಬ್ಯಾಟಿಂಗ್ ಮಾಡಿದ ಕೇವಲ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ನಾಲ್ಕರಲ್ಲೂ ಶತಕ ಸಿಡಿಸಿರುವುದು ಪಡಿಕ್ಕಲ್ ಅವರ ಅದ್ಭುತ ಲಯಕ್ಕೆ ಸಾಕ್ಷಿಯಾಗಿದೆ. ತ್ರಿಪುರ ವಿರುದ್ಧದ ಪಂದ್ಯದಲ್ಲಿ ಜವಾಬ್ದಾರಿಯುತ ಆಟವಾಡಿದ ಅವರು 108 ರನ್ ಗಳಿಸಿ ತಂಡಕ್ಕೆ ಆಸರೆಯಾದರು.

ಈ ಅಮೋಘ ಶತಕದೊಂದಿಗೆ ವಿಜಯ್ ಹಜಾರೆ ಟ್ರೋಫಿಯ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಪಡಿಕ್ಕಲ್ ಜಂಟಿಯಾಗಿ ಎರಡನೇ ಸ್ಥಾನಕ್ಕೇರಿದ್ದಾರೆ.

error: Content is protected !!