Sunday, January 11, 2026

CINE | 30 ದಿನ ಆದ್ರೂ ‘ಧುರಂಧರ್’ ಕ್ರೇಜ್ ಕಡಿಮೆಯಾಗಿಲ್ಲ: ಗಲ್ಲಾಪೆಟ್ಟಿಗೆಯಲ್ಲಿ ಸುರಿಯುತ್ತಿದೆ ಹಣದ ಮಳೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಡುಗಡೆಯಾಗಿ ಒಂದು ತಿಂಗಳು ಕಳೆದರೂ ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್’ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿ ತನ್ನ ವೇಗವನ್ನು ಕಮ್ಮಿ ಮಾಡಿಲ್ಲ. ನಟ ರಣವೀರ್ ಸಿಂಗ್‌ಗೆ ಭರ್ಜರಿ ಕಮ್‌ಬ್ಯಾಕ್ ನೀಡಿರುವ ಈ ಚಿತ್ರ, ಪ್ರತಿದಿನವೂ ಹೊಸ ದಾಖಲೆಗಳನ್ನು ಬರೆಯುತ್ತಲೇ ಸಾಗುತ್ತಿದೆ.

ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ 10 ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಸಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಈವರೆಗೆ ಒಟ್ಟು 759 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿಶ್ವಾದ್ಯಂತ ಸಿನಿಮಾದ ಗಳಿಕೆ 1167 ಕೋಟಿ ರೂಪಾಯಿಗೆ ತಲುಪಿದ್ದು, ಶೀಘ್ರದಲ್ಲೇ ಭಾರತದಲ್ಲಿ 800 ಕೋಟಿ ಹಾಗೂ ಜಾಗತಿಕವಾಗಿ 1200 ಕೋಟಿ ರೂಪಾಯಿ ಗಡಿ ದಾಟಲಿದೆ ಎನ್ನಲಾಗುತ್ತಿದೆ. ಈ ಮೂಲಕ ಮತ್ತೊಂದು ಹೊಸ ದಾಖಲೆ ಸ್ಥಾಪಿಸುವ ಹಂತಕ್ಕೆ ‘ಧುರಂಧರ್’ ಬಂದಿದೆ.

ಇದನ್ನೂ ಓದಿ:Snacks Series 5 | ಮನೆಯಲ್ಲೇ ಹೋಟೆಲ್ ಸ್ಟೈಲ್ ಸ್ನಾಕ್ಸ್ ಸವಿಬೇಕಾ? ಹಾಗಿದ್ರೆ ಕ್ರಿಸ್ಪಿ ಪನೀರ್ ನಗೆಟ್ಸ್ ಟ್ರೈ ಮಾಡಿ

ನೈಜ ಘಟನೆಗಳನ್ನು ಆಧರಿಸಿದ ಕಥಾವಸ್ತು, ಬಲವಾದ ನಿರೂಪಣೆ ಮತ್ತು ಅಭಿನಯ ಚಿತ್ರದ ದೊಡ್ಡ ಶಕ್ತಿ ಆಗಿವೆ. ರಣವೀರ್ ಸಿಂಗ್ ಜೊತೆಗೆ ಅರ್ಜುನ್ ರಾಮ್‌ಪಾಲ್, ಸಂಜಯ್ ದತ್, ಅಕ್ಷಯ್ ಖನ್ನಾ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚೀನಾ ಮಾರುಕಟ್ಟೆ ಹೊರತುಪಡಿಸಿ ವಿಶ್ವಾದ್ಯಂತ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾ ಎಂಬ ದಾಖಲೆ ಇದುವರೆಗೆ ಶಾರುಖ್ ಖಾನ್ ನಟನೆಯ ‘ಜವಾನ್’ ಹೆಸರಲ್ಲಿತ್ತು. ಇದೀಗ ಆ ದಾಖಲೆಯನ್ನು ‘ಧುರಂಧರ್’ ಮುರಿದಿದೆ. 2023ರಲ್ಲಿ ಬಿಡುಗಡೆಯಾದ ‘ಜವಾನ್’ 1600 ಕೋಟಿ ರೂಪಾಯಿ ಗಳಿಸಿದ್ದರೆ, ‘ಧುರಂಧರ್’ ಈಗಾಗಲೇ 1167 ಕೋಟಿ ದಾಟಿದೆ.

error: Content is protected !!