Sunday, January 11, 2026

ವೆನಿಜುವೆಲಾ–ಅಮೆರಿಕ ಬಿಕ್ಕಟ್ಟು: ಥರ ಥರ ನಡುಗುತ್ತಿದೆ ಜಾಗತಿಕ ತೈಲ ಮಾರುಕಟ್ಟೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೆನಿಜುವೆಲಾ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರ ಹಂತ ತಲುಪಿದ್ದು, ಇದರ ಪ್ರಭಾವ ಜಾಗತಿಕ ತೈಲ ಮಾರುಕಟ್ಟೆಯ ಮೇಲೂ ಬೀರುವ ಸಾಧ್ಯತೆ ಕಾಣಿಸುತ್ತಿದೆ. ಇದರ ಪರಿಣಾಮ ಮುಂದಿನ ದಿನಗಳಲ್ಲಿ ತೈಲ ಬೆಲೆಗಳ ಮೇಲೆ ಬೀರುವ ಸಾಧ್ಯತೆ ಇರುವುದರಿಂದ ವಿಶ್ವ ಮಾರುಕಟ್ಟೆ ಈ ಬೆಳವಣಿಗೆಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಿದೆ.

ವೆನಿಜುವೆಲಾದಲ್ಲಿ ಅಮೆರಿಕ ನಡೆಸಿದ ಸೇನಾ ಕಾರ್ಯಾಚರಣೆ ಹಾಗೂ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಬಂಧಿಸಿದ ಬೆಳವಣಿಗೆಗಳು ರಾಜಕೀಯ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿವೆ. ಇದರಿಂದ ಮುಂದಿನ ದಿನಗಳಲ್ಲಿ ಕಚ್ಚಾ ತೈಲ ಪೂರೈಕೆಗೆ ಅಡ್ಡಿ ಉಂಟಾಗುವ ಆತಂಕ ಉಂಟಾಗಿದೆ.

ಇದನ್ನೂ ಓದಿ: Rice series 40 | ಬಾಯಲ್ಲಿ ನೀರೂರಿಸೋ ಪನೀರ್ ಫ್ರೈಡ್ ರೈಸ್! ರೆಸಿಪಿ ಇಲ್ಲಿದೆ

ವೆನಿಜುವೆಲಾ ವಿಶ್ವದಲ್ಲೇ ಅತಿದೊಡ್ಡ ಕಚ್ಚಾ ತೈಲ ನಿಕ್ಷೇಪಗಳನ್ನು ಹೊಂದಿರುವ ಪ್ರಮುಖ ತೈಲ ಉತ್ಪಾದಕ ರಾಷ್ಟ್ರ. ಆದರೆ ಅಮೆರಿಕದ ನಿರ್ಬಂಧಗಳಿಂದಾಗಿ ಕಳೆದ ಕೆಲವು ವರ್ಷಗಳಿಂದ ಅಲ್ಲಿನ ತೈಲ ರಫ್ತು ಸೀಮಿತವಾಗಿತ್ತು. ಇದೀಗ ಅಧ್ಯಕ್ಷರ ಬಂಧನದ ಬಳಿಕ ವೆನಿಜುವೆಲಾದ ತೈಲ ಉದ್ಯಮದ ಮೇಲೆ ಅಮೆರಿಕದ ಹಿಡಿತ ಮತ್ತಷ್ಟು ಬಲಗೊಳ್ಳಲಿದೆ ಎಂಬ ಚರ್ಚೆ ಜೋರಾಗಿದೆ.

ಪ್ರಸ್ತುತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 60 ಡಾಲರ್‌ ಸುತ್ತಮುತ್ತ ಇದೆ. ಆದರೆ ಈ ಉದ್ವಿಗ್ನತೆ ಮುಂದುವರಿದರೆ, ತೈಲ ಸಾಗಣೆ ಮತ್ತು ಬಂದರು ಕಾರ್ಯಾಚರಣೆಗಳಲ್ಲಿ ತೊಂದರೆ ಉಂಟಾಗಿ ಬೆಲೆಗಳಲ್ಲಿ ಏರಿಳಿತ ಸಂಭವಿಸುವ ಸಾಧ್ಯತೆ ಇದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!