ಮನೆಮಂದಿಗೆ ಇಷ್ಟವಾಗುವ ಹಾಗೂ ಆರೋಗ್ಯಕ್ಕೂ ಒಳ್ಳೆಯದಾದ ಸಂಜೆಯ ತಿಂಡಿ ವೆಜಿಟೇಬಲ್ ಅಂಬಡೆ. ಕಾಳುಗಳು ಮತ್ತು ತರಕಾರಿಗಳ ಪೌಷ್ಟಿಕತೆಯೊಂದಿಗೆ ತಯಾರಾಗುತ್ತೆ.
ಬೇಕಾಗುವ ಸಾಮಗ್ರಿಗಳು:
ಕಡಲೆ ಬೇಳೆ– 1 ಕಪ್ (3–4 ಗಂಟೆ ನೆನೆಸಿದ)
ಈರುಳ್ಳಿ – 1
ಕ್ಯಾರೆಟ್ – 1 (ತುರಿದ)
ಬೀನ್ಸ್ – ¼ ಕಪ್
ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್
ಹಸಿಮೆಣಸು – 2
ಶುಂಠಿ – 1 ಟೀ ಸ್ಪೂನ್
ಜೀರಿಗೆ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಎಣ್ಣೆ – ಕರಿಯಲು
ತಯಾರಿಸುವ ವಿಧಾನ:
ನೆನೆಸಿದ ಕಡಲೆಕಾಳುಗಳ ನೀರು ಚೆನ್ನಾಗಿ ತೆಗೆದು ಮಿಕ್ಸಿಯಲ್ಲಿ ದಪ್ಪದ ಪೇಸ್ಟ್ ಆಗಿ ರುಬ್ಬಿಕೊಳ್ಳಿ. ಅದಕ್ಕೆ ಈರುಳ್ಳಿ, ತರಕಾರಿಗಳು, ಹಸಿಮೆಣಸು, ಶುಂಠಿ, ಜೀರಿಗೆ, ಕೊತ್ತಂಬರಿ ಸೊಪ್ಪು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ಮಿಶ್ರಣವನ್ನು ಚಿಕ್ಕ ಚಿಕ್ಕ ಅಂಬಡೆ ಆಕಾರದಲ್ಲಿ ಮಾಡಿ. ಕಾದ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ.

