ಹೊಸದಿಗಂತ ವರದಿ, ದಾಂಡೇಲಿ :
ನಗರದ ಸಮೀಪದಲ್ಲಿರುವ ಕೋಗಿಲಬನದ ಕೆರೆಯ ದಡದಲ್ಲಿ ಮೊಸಳೆ ಮತ್ತು ಬೃಹತ್ ಗಾತ್ರದ ಆಮೆಯೊಂದು ಭಾನುವಾರ ಪ್ರತ್ಯಕ್ಷವಾಗಿ ಎಲ್ಲರ ಗಮನ ಸೆಳೆದಿದೆ.
ಕೆರೆಯ ದಡದ ಒಂದು ಬದಿಯಲ್ಲಿ ಮೊಸಳೆಯೊಂದು ವಿಶ್ರಾಂತಿಯ ಮೂಡಿನಲ್ಲಿದ್ದರೇ, ಇನ್ನೊಂದು ಬದಿಯಲ್ಲಿ ಬೃಹತ್ ಗಾತ್ರದ ಆಮೆಯೊಂದು ತನ್ನದೇ ಆದ ಗುಂಗಿನಲ್ಲಿರುವುದು ಕಂಡು ಬಂದಿದೆ. ಇದು ಸ್ಥಳೀಯ ರಸ್ತೆಯಲ್ಲಿ ಹೋಗುವವರಿಗೆ ಹಾಗೂ ಸ್ಥಳೀಯವಾಗಿ ಬಂದಿರುವ ಪ್ರವಾಸಿಗರಿಗೆ ವಿಶೇಷವಾದ ಆಕರ್ಷಣೆಯಾಗಿ ಗಮನ ಸೆಳೆದಿದೆ.

