Thursday, January 8, 2026

ಟ್ರಂಪ್​ಗೆ ಸಾಧ್ಯವಾಗುತ್ತೆ ಎಂದಾದರೆ, ಮೋದಿಜಿ ಪಾಕ್ ಗೆ ನುಗ್ಗಿ ಮುಂಬೈ ದಾಳಿ ಮಾಸ್ಟರ್​ಮೈಂಡ್​ನನ್ನು ಕರೆ ತನ್ನಿ: ಒವೈಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೆನಿಜುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೊ ಅವರ ಬಂಧನ ಕುರಿತು ಜಾಗತಿಕವಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದಲ್ಲಿರುವ ಪರಿಸ್ಥಿತಿ ಮತ್ತು ಬೆಳವಣಿಗೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಇತ್ತ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರು, ನಿಲೋಲಾಸ್ ಮಡುರೊ ಬಂಧಿಸಿದ ರೀತಿಯಲ್ಲೇ 2009ರ ಮುಂಬೈ ದಾಳಿ ಘಟನೆಯ ಸಂಚುಕೋರರನ್ನೂ ಸೆರೆ ಹಿಡಿಯಬೇಕೆಂದು ಆಗ್ರಹಿಸಿದ್ದಾರೆ.

ಚುನಾವಣಾ ಸಮಾವೇಶವೊಂದರಲ್ಲಿ ಭಾಷಣ ಮಾಡುತ್ತಿದ್ದ ಒವೈಸಿ, ಅಮೆರಿಕದವರು ವೆನಿಜುವೆಲಾ ಮೇಲೆ ಏರ್ ಸ್ಟ್ರೈಕ್ ಮಾಡಿ ಅದರ ಅಧ್ಯಕ್ಷ ನಿಕೋಲಾಸ್ ಮಡುರೊ ಅವರನ್ನು ಸೆರೆಹಿಡಿದಿದೆ. ಆದರೆ, ಮುಂಬೈ ದಾಳಿ ಮಾಸ್ಟರ್​ಮೈಡ್​ಗಳನ್ನು ಅದೇ ರೀತಿ ಭಾರತಕ್ಕೆ ಸೆರೆಹಿಡಿಯಲು ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.

‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪಡೆಗಳು ವೆನಿಜುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೊರನ್ನು ಅವರ ದೇಶದಲ್ಲೇ ಸೆರೆ ಹಿಡಿದು ಅಮೆರಿಕಕ್ಕೆ ಕರೆದೊಯ್ದಿದ್ದಾರೆ. ವೆನಿಜುವೆಲಾ ಅಧ್ಯಕ್ಷರನ್ನು ಅವರ ದೇಶದಿಂದಲೇ ಟ್ರಂಪ್ ಅಪಹರಿಸಬಲ್ಲರೆಂದರೆ ನೀವು ಕೂಡ ಪಾಕಿಸ್ತಾನಕ್ಕೆ ಹೋಗಿ ಮುಂಬೈ ಉಗ್ರ ದಾಳಿ ಘಟನೆಯ ಮಾಸ್ಟರ್​ಮೈಂಡ್​ನನ್ನೂ ಹಿಡಿದು ಭಾರತಕ್ಕೆ ತರಬಹುದಲ್ಲ’ ಎಂದು ಕೇಳಿದ್ದಾರೆ.

‘ಮೋದಿಜಿ, ಪಾಕಿಸ್ತಾನಕ್ಕೆ ಸೇನೆಗಳನ್ನು ನುಗ್ಗಿಸಿ ಮುಂಬೈ ದಾಳಿಯ ಸಂಚುಕೋರ ಮಸೂದ್ ಅಝರ್ ಆಗಲೀ ಅಥವಾ ಲಷ್ಕರೆ ತೈಯಬಾದ ರಕ್ಕರೇ ಆಗಲೀ ಸೆರೆಹಿಡಿದು ಭಾರತಕ್ಕೆ ಕರೆತನ್ನಿ ಎಂದು ನಾವು ಹೇಳುತ್ತಿದ್ದೇವೆ. ಟ್ರಂಪ್​ಗೆ ಸಾಧ್ಯವಾಗುತ್ತೆ ಎಂದಾದರೆ ಮೋದಿಜಿ ನೀವೇನೂ ಕಡಿಮೆ ಅಲ್ಲ. ನೀವೂ ಕೂಡ ಈ ಕೆಲಸ ಮಾಡಬಹುದು’ ಎಂದು ಹೇಳಿದ್ದಾರೆ.

error: Content is protected !!