ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಆಸ್ಕರ್ ಪ್ರಶಸ್ತಿಯ ಸ್ಪರ್ಧಾ ಪಟ್ಟಿಯಲ್ಲಿ ಭಾರತದ ಹಲವು ಸಿನಿಮಾಗಳು ಸದ್ದುಮಾಡುತ್ತಿದೆ.
2025ರ ಸಾಲಿನಲ್ಲಿ ಭಾರತದಲ್ಲಿ ಹಲವು ಸಿನಿಮಾಗಳು ಸೂಪರ್ ಹಿಟ್, ಬ್ಲಾಕ್‌ಬಸ್ಟರ್ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಈ ಪೈಕಿ ಕಾಂತಾರಾ ಚಾಪ್ಟರ್ 1, ದುರಂಧರ್,ಛಾವಾ, ಸೈಯಾರಾ ಸೇರಿದಂತೆ ಹಲವು ಸಿನಿಮಾಗಳು ಜನರ ಮೆಚ್ಚುಗೆ ಮಾತ್ರವಲ್ಲ, ಕಲೆಕ್ಷನ್‌ನಲ್ಲೂ ದಾಖಲೆ ಬರೆದಿದೆ.
ಇದೀಗ ಆಸ್ಕರ್ ಪ್ರಶಸ್ತಿಯ ಸ್ಪರ್ಧಾ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಮರಾಠಿಯ ದಶಾವತಾರ್. 2026ರ ಆಸ್ಕರ್ ಪಟ್ಟಿಯಲ್ಲಿ ದಶಾವತಾರ್ ಕಾಣಿಸಿಕೊಂಡಿದೆ ಅನ್ನೋ ಸಂತಸವನ್ನು ಚಿತ್ರ ತಂಡ ಹಂಚಿಕೊಂಡಿದೆ.
2000 ಸಿನಿಮಾಗಳ ಸಲ್ಲಿಸಿತ್ತು ಅರ್ಜಿ
ಆಸ್ಕರ್ ಪ್ರಶಸ್ತಿಗೆ ಬರೋಬ್ಬರಿ 2,000 ಸಿನಿಮಾಗಳು ಅರ್ಜಿ ಸಲ್ಲಿಸಿತ್ತು. ಇದರಲ್ಲಿ 150 ರಿಂದ 250 ಸಿನಿಮಾಗಳು ಮಾತ್ರ ಆಸ್ಕರ್ ಪ್ರಶಸ್ತಿ ಪಟ್ಟಿಗೆ ಆಯ್ಕೆಯಾಗಲಿದೆ. ಹೀಗೆ ಆಯ್ಕೆಯಾದ ಪಟ್ಟಿಯಲ್ಲಿ ಮರಾಠಿ ಸಿನಿಮಾ ದಶವತಾರ್ ಕೂಡ ಒಂದು. ಈ ಸ್ಪರ್ಧಾ ಪಟ್ಟಿಯಲ್ಲಿ ವಿವಿದ ಮಾನದಡಂಗಳ ಅನುಸಾರ ಆಯ್ಕೆ ನಡೆಯಲಿದೆ.
ಇದೇ ಮೊದಲ ಬಾರಿಗೆ ಮರಾಠಿ ಸಿನಿಮಾ ಒಂದು ಆಸ್ಕರ್ ಸ್ಪರ್ಧಾ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಮರಾಠಿ ಸಿನಿಮಾ ಲೋಕ, ಅಭಿಮಾನಿಗಳು ಈ ಸಾಧನೆಯನ್ನು ಕೊಂಡಾಡಿದ್ದಾರೆ. ಭಾರತೀಯ ನೆಲದ, ವಿಷ್ಣು ಅವತಾರ ಕತೆಗೆ ವಿಶ್ವ ಮನ್ನಣೆ ಸಿಕ್ಕಿದೆ.
ದಶವತಾರ್ ಮರಾಠಿ ಸಿನಿಮಾ. ಸುಬೋದ್ ಕಾನೋಲ್ಕರ್ ಈ ಸಿನಿಮಾ ನಿರ್ದೇಶಿಸಿದ್ದಾರೆ. ಒಶಿಯನ್ ಫಿಲ್ಮ್ ಕಂಪನಿ ಈ ಸಿನಿಮಾ ನಿರ್ಮಾಣ ಮಾಡಿದೆ. ಪರಿಶ್ರಮ, ಶ್ರದ್ಧೆ, ಎಲ್ಲಾ ಕಲಾವಿಧರು ಪ್ರಯತ್ನ, ಅಭಿಮಾನಿಗಳ ಪೋತ್ಸಾಹಕ್ಕೆ ಸಿಕ್ಕಿದ ಗೌರವ ಇದು ಎಂದು ಸಿನಿಮಾ ತಂಡ ಹೇಳಿದೆ.

