ನಿತ್ಯ ಬೆಳಗ್ಗೆ ಕಾಫಿ ಕುಡಿಯುವುದು ನಮ್ಮ ದಿನದ ರೂಟೀನ್. ಆದರೆ ಕಾಫಿ ಪುಡಿಯನ್ನು ಕೇವಲ ಪಾನೀಯಕ್ಕಾಗಿ ಮಾತ್ರವಲ್ಲ, ತ್ವಚೆ ಆರೈಕೆ ಮತ್ತು ಸೌಂದರ್ಯದ ಉದ್ದೇಶಕ್ಕೂ ಬಳಸಬಹುದು ಎಂಬ ಸಂಗತಿ ಹೆಚ್ಚಿನವರಿಗೆ ಗೊತ್ತಿಲ್ಲ. ಕಾಫಿ ಪುಡಿ ಸ್ಕಿನ್ ಗೆ ಎಷ್ಟು ಉಪಯುಕ್ತ ಅಂತ ಗೊತ್ತಾದ್ರೆ ನಾಳೆಯಿಂದ ಕಾಫಿ ಮಾಡೋದೇ ಇಲ್ಲ ಬರಿ ಮುಖಕ್ಕೆ ಹಚ್ಕೋತಿರಾ.
ಕಾಫಿ ಪುಡಿಯನ್ನು ತ್ವಚೆಗೆ ಹಚ್ಚುವ ಮೂಲಕ ತ್ವಚೆಯಲ್ಲಿನ ಎಣ್ಣೆ ಅಂಶವನ್ನು ಕಡಿಮೆ ಮಾಡುತ್ತದೆ. ಜೊತೆಗೆ, ಕಾಫಿಯಲ್ಲಿನ ಕ್ಯಾಫೀನ್ ತ್ವಚೆಯ ರಕ್ತಸಂಚಾರವನ್ನು ಉತ್ತೇಜಿಸಿ ಮುಖಕ್ಕೆ ಆರೋಗ್ಯಕರ ತಾಜಾತನ ತರುವುದಲ್ಲದೆ, ಚರ್ಮವನ್ನು ಮೃದುವಾಗಿ ಮಾಡುವ ಗುಣವಿದೆ. ಕಾಫಿ ಪುಡಿ ಮತ್ತು ತುಪ್ಪ ಅಥವಾ ನಿಂಬೆ ಹಣ್ಣಿನ ಮಿಶ್ರಣವನ್ನು ಮುಖಕ್ಕೆ ಹಚ್ಚಿದರೆ ತ್ವಚೆಗೆ ಮೃದುವು, ಹೊಳೆಯುವ ಗುಣ ಬರುತ್ತದೆ.
ಇದನ್ನೂ ಓದಿ: KSRTC ಪ್ರಯಾಣಿಕರಿಗೆ ಸಿಹಿ ಸುದ್ದಿ: ಪ್ರೀಮಿಯಂ ಬಸ್ ದರ ಕಡಿತ
ಕಾಫಿ ಪುಡಿಯನ್ನು ಸ್ಕ್ರಬ್ ರೂಪದಲ್ಲಿ ಬಳಸಿದರೆ, ತ್ವಚೆಯ ಮೇಲೆ ಹಳೆಯ ಡೆಡ್ ಸ್ಕಿನ್ ಹೊರ ಹೋಗಿ ತ್ವಚೆ ಹೊಳೆಯುತ್ತದೆ.
ಕಾಫಿ ಪುಡಿ ಬಳಸೋದು ಕೇವಲ ಕುಡಿಯೋದಕ್ಕಲ್ಲ, ನಿಮ್ಮ ಮುಖದ ಅಂದ ಹೆಚ್ಚಿಸಲು ಸಹಾಯಕವಾಗುವ ನೈಸರ್ಗಿಕ ಉತ್ಪನ್ನ ಕೂಡ ಆಗಿದೆ.

