ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊನೆಯ ಕೆಲವು ತಿಂಗಳಲ್ಲಿ ಕೋಲಾರ, ಗದಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹುಸಿ ಬಾಂಬ್ ಬೆದರಿಕೆ ಇ-ಮೇಲ್‌ಗಳು ಬಂದಿದ್ದು, ಇವತ್ತು ಮೈಸೂರು ಹಳೆಯ ಕೋರ್ಟ್ ಸೇರಿದಂತೆ ಬಾಗಲಕೋಟೆ ಜಿಲ್ಲಾ ನ್ಯಾಯಾಲಯಕ್ಕೆ ಕೂಡ ಬೆದರಿಕೆ ಸಂದೇಶಗಳು ತಲುಪಿವೆ. ತಪಾಸಣೆ ನಡೆಸಿದ ಬಾಂಬ್ ನಿಷ್ಕ್ರಿಯ ತಂಡಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ದೃಢಪಡಿಸಿದ್ದಾರೆ.
ಮೈಸೂರು ಕೋರ್ಟ್‌ಗೆ ಬಂದ ಇ-ಮೇಲ್‌ನಲ್ಲಿ ಮಧ್ಯಾಹ್ನ 1.55ಕ್ಕೆ ಮೂರು ಆರ್‌ಡಿಎಕ್ಸ್ ಬಾಂಬ್ ಇಟ್ಟಿರುವುದು ಹಾಗೂ ಆತ್ಮಹತ್ಯಾ ದಾಳಿ ಮಾಡುವುದಾಗಿ ಎಚ್ಚರಿಸಲಾಗಿದೆ. ನ್ಯಾಯಾಧೀಶರು, ವಕೀಲರು, ಕಕ್ಷಿದಾರರು ತಕ್ಷಣ ಹೊರಬಂದಿದ್ದು, ಸ್ಥಳಕ್ಕೆ ತಪಾಸಣಾ ತಂಡ ಕಳುಹಿಸಲಾಯಿತು. ಬಾಗಲಕೋಟೆ ಕೋರ್ಟ್ ಗೂ ಮಧ್ಯಾಹ್ನ ಸಮಯದಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಸಿಬ್ಬಂದಿ ಮತ್ತು ಸಾರ್ವಜನಿಕರಲ್ಲಿ ಭಯ ಉಂಟುಮಾಡಿತು.
ಇದನ್ನೂ ಓದಿ: Rice series 22 | ಹೆಚ್ಚು ಟೈಮ್ ಬೇಡ, ಫಟಾಫಟ್ ಅಂತ ರೆಡಿ ಆಗುತ್ತೆ ಈ ಕರಿಬೇವು ಚಿತ್ರಾನ್ನ
ಈ ಮಧ್ಯೆ, ಬೆಂಗಳೂರಿನ ಲಾಲ್‌ಬಾಗ್ ಪಾಸ್‌ಪೋರ್ಟ್ ಕಚೇರಿಗೂ ಇ-ಮೇಲ್ ಮೂಲಕ ಬೆದರಿಕೆ ತಲುಪಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ತಪಾಸಣೆ ನಡೆಸಿದ್ದಾರೆ. ಪೋಲಿಸರು ಎಲ್ಲಾ ಕೋರ್ಟ್‌ಗಳಲ್ಲಿ ಭದ್ರತೆ ಕ್ರಮಗಳನ್ನು ಹೆಚ್ಚಿಸುತ್ತಿರುವರು, ಸಾರ್ವಜನಿಕರನ್ನು ಎಚ್ಚರಿಕೆಯಿಂದಿರಲು ಸೂಚಿಸಿದ್ದಾರೆ.

