September 9, 2026
Wednesday, September 9, 2026
spot_img

ಕಳ್ಳ ಎಂದು ಅಟ್ಟಾಡಿಸಿದ ಜನ: ಬಾಂಗ್ಲಾದಲ್ಲಿ ಕಾಲುವೆಗೆ ಹಾರಿ ಹಿಂದು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಳ್ಳತನ ಮಾಡಿದ್ದಾನೆ ಅಂತ ಬೆನ್ನಟ್ಟಿ ಬರುತ್ತಿದ್ದ ಗುಂಪಿನಿಂದ ತಪ್ಪಿಸಿಕೊಳ್ಳಲು ಓಡುವಾಗ ಕಾಲುವೆಗೆ ಜಿಗಿದು 25 ವರ್ಷದ ಹಿಂದು ಸಾವನ್ನಪ್ಪಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.

ಬಾಂಗ್ಲಾದ ನೌಗಾಂವ್ ಜಿಲ್ಲೆಯ ಮಹಾದೇಬ್‌ಪುರ ಪ್ರದೇಶದಲ್ಲಿ ಘಟನೆ ನಡೆದಿದ್ದು, ಮೃತದೇಹ ಹೊರ ತೆಗೆಯಲಾಗಿದೆ. ಬಲಿಪಶುವನ್ನ ಭಂಡಾರ್‌ಪುರ ಗ್ರಾಮದ ನಿವಾಸಿ ಮಿಥುನ್ ಸರ್ಕಾರ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ದೇವರಾಜ ಅರಸ್‌ ಆಡಳಿತಕ್ಕೆ ಸಿದ್ದರಾಮಯ್ಯ ಆಡಳಿತದ ಹೋಲಿಕೆ ಬೇಡ : ಬಿಎಸ್‌ವೈ

ಮಿಥುನ್‌ ಸರ್ಕಾರ್‌ ಕಳ್ಳತನ ಮಾಡಿದ್ದಾರೆ ಅಂತ ತಿಳಿದು ಸ್ಥಳೀಯರ ಗುಂಪೊಂದು ಅಟ್ಟಾಡಿಸಿಕೊಂಡು ಹೋಗ್ತಿತ್ತು. ತಪ್ಪಿಸಿಕೊಳ್ಳೋದಕ್ಕಾಗಿ ಓಡ್ತಿದ್ದ ಮಿಥುನ್‌ ಕಾಲುವೆಗೆ ಹಾರಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಮೃತದೇಹವನ್ನ ಹೊರಕ್ಕೆ ತೆಗೆದಿದ್ದಾರೆ. ಆದ್ರೆ ಮಿಥುನ್‌ ಕಳ್ಳತನ ಮಾಡಿದ್ದಾರೆಯೇ ಇಲ್ಲವೇ ಅನ್ನೋದು ಇನ್ನೂ ದೃಢವಾಗಿಲ್ಲ.

ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪ ಸಂಖ್ಯಾತರ ಮೇಲಿನ ಸರಣಿ ದಾಳಿಗಳು ನಡೆಯುತ್ತಿರುವ ಬೆನ್ನಲ್ಲೇ ಈ ಘಟನೆ ನಡೆಸಿದೆ. ಮಿಥುನ್‌ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !