Saturday, January 10, 2026

ಬಿಜೆಪಿ ಕಾರ್ಯಕರ್ತೆ ಮೇಲೆ ದೌರ್ಜನ್ಯ: ಇಡೀ ರಾಜ್ಯವೇ ತಲೆ ತಗ್ಗಿಸೋ ಘಟನೆ ಎಂದ ವಿಜಯೇಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ಪೊಲೀಸರು ಮಾಡಿರೋ ದೌರ್ಜನ್ಯ ಇಡೀ ರಾಜ್ಯವೇ ತಲೆ ತಗ್ಗಿಸೋ ಘಟನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಕಾರ್ಯಕರ್ತೆ SIR ಮ್ಯಾಪಿಂಗ್ ಮಾಡೋ ಸಮಯದಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿ ಕಾಂಗ್ರೆಸ್ ಅವರೇ ದೂರು ನೀಡಿದ್ದಾರೆ. ಪೊಲೀಸರು ಕಾಂಗ್ರೆಸ್ ಅವರ ದೂರಿನ ಹಿನ್ನೆಲೆ ಮಹಿಳೆ ಮೇಲೆ ದೌರ್ಜನ್ಯ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತೆ ಸುಜಾತ ದಲಿತ ಮಹಿಳೆ. ಅವರನ್ನ ವಿವಸ್ತ್ರಗೊಳಿಸಿದ್ದಾರೆ. ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿ ಆಗಿವೆ. ಕಾಂಗ್ರೆಸ್ ‌ಏಜೆಂಟ್ ರೀತಿ ಪೊಲೀಸರು ಕೆಲಸ ಮಾಡ್ತಾ ಇದ್ದಾರೆ. ಈ ಘಟನೆ ಖಂಡಿಸುತ್ತೇನೆ. ಅಯೋಗ್ಯ ಅಧಿಕಾರಿಗಳನ್ನ ಗೃಹ ಸಚಿವರು ಕೂಡಲೇ ಅಮಾನತು ‌ಮಾಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರ 140 ಶಾಸಕರು ಇದ್ದಾರೆ ಅಂತ ಅಹಂಕಾರದಿಂದ ನಡೆದುಕೊಳ್ಳುತ್ತಿದ್ದಾರೆ. ಬಳ್ಳಾರಿ, ಹುಬ್ಬಳ್ಳಿ, ಬೀದರ್ ಹೀಗೆ ಅನೇಕ ಕಡೆ ಇಂತಹ ಘಟನೆ ಆಗ್ತಿವೆ. ಕಾಂಗ್ರೆಸ್ ಪಾಪದ ಕೊಡ ತುಂಬಿದೆ. ರಾಜ್ಯದ ಜನ ಇವರಿಗೆ ಶಾಪ ಹಾಕ್ತಿದ್ದಾರೆ. ಸಮಯ ಬಂದಾಗ ಜನರೇ ಉತ್ತರ ಕೊಡ್ತಾರೆ. ಸಿಎಂ ಅವರು ಈಗಲಾದ್ರು ಎಚ್ಚೆತ್ತುಕೊಳ್ಳಬೇಕು ಅಂತ ಒತ್ತಾಯ ಮಾಡಿದರು.

error: Content is protected !!