ಹೊಸದಿಗಂತ ವರದಿ ಹಳಿಯಾಳ :
ಪಟ್ಟಣದಂಚಿನ ಬಾಣಸಗೇರಿ ಗ್ರಾಮದ ಸಮೀಪದಲ್ಲಿ ಬೆಳಗಿನ ಮುಂಜಾವಿನಲ್ಲಿ ಶಾಲೆಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ತುಂಬಿದ್ದ ಬಸ್ ಒಂದು
ಕಿರುರಸ್ತೆಯಲ್ಲಿ ಓವರ್ ಟೇಕ್ ಮಾಡುವ ಭರದಲ್ಲಿ ರಸ್ತೆಯಂಚಿನ ಮರಕ್ಕೆ ಗುದ್ದಿ ಅಪಘಾತಕ್ಕೊಳಗಾಗಿದೆ.
ಬಸ್ನಲ್ಲಿದ್ದ ಹಲವಾರು ವಿದ್ಯಾರ್ಥಿಗಳಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಮುಂದಿನ ಆಸನದಲ್ಲಿ ಕುಳಿತಿದ್ದ ವಿದ್ಯಾರ್ಥಿಯ ಕಾಲಿಗೆ ಗಂಭೀರ ಸ್ವರೂಪದ ಹಾನಿಯಾಗಿದೆ.
ಅಪಘಾತಕ್ಕೊಳಗಾದ ಬಸ್ಸಿನಲ್ಲಿ ಸಿಲುಕಿದ್ದ ಗಾಯಾಳುವನ್ನು ಹೊರತೆಗೆಯಲು ಬಸ್ಸಿನ ಕೆಲ ಭಾಗಗಳನ್ನು ಕತ್ತರಿಸಿ ತೆಗೆಯಬೇಕಾದ ಅನಿವಾರ್ಯತೆ ಉಂಟಾಗಿದ್ದು ಸರಿ ಸುಮಾರು ತಾಸುಗಟ್ಟಲೇ ಪೊಲೀಸ್ ಅಧಿಕಾರಿಗಳು, ಸಿಬ್ಬಂಧಿಗಳು, ಸಾರ್ವಜನಿಕರು ಹರಸಾಹಸ ಪಡುತ್ತಿದ್ದು ಸ್ಥಳದಲ್ಲಿ ಜನದಟ್ಟಣೆ ವಿಪರೀತವಾಗಿತ್ತು.
ಗಾಯಾಳು ವಿದ್ಯಾರ್ಥಿಯ ತಾಯಿಯ ಆಕ್ರಂಧನ ಕೇಳಲು ಹಿಂಸೆಯಾಗಿದ್ದು, ಘಟನೆ ಆದ ಅಲ್ಪ ಸಮಯದಲ್ಲೇ ಪೊಲೀಸ್ ಇಲಾಖೆಯು ತ್ವರಿತವಾಗಿ ಸ್ಪಂಧಿಸಿದ್ದು ವಾತಾವರಣವನ್ನು ಬಹು ಸೂಕ್ಷ್ಮವಾಗಿ ನಿಯಂತ್ರಿಸುತ್ತಿದ್ದು ಸಾರ್ವಜನಿಕರ ಶ್ಲಾಘನೆಗೆ ಒಳಪಟ್ಟಿದೆ.
ಅಪಘಾತ ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಸಿಪಿಆಯ್ ಜಯಪಾಲ್ ಪಾಟೀಲ್ ರವರ ಮಾರ್ಗದರ್ಶನದಲ್ಲಿ ಪಿಎಸ್ಆಯ್ ಬಸವರಾಜ ಮಬನೂರ್ ನೇತೃತ್ವದಲ್ಲಿ ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದೆ.

