Saturday, January 10, 2026

CINE | ‘ಟಾಕ್ಸಿಕ್’ ಡೆಡ್ಲಿ ಟೀಸರ್‌ಗೆ ದಾಖಲೆಯ ಸ್ಪಂದನೆ: ಒಂದು ಗಂಟೆಯಲ್ಲೇ ಮಿಲಿಯನ್ ವೀಕ್ಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಟೀಸರ್ ಬಿಡುಗಡೆಯಾದ ಕ್ಷಣದಿಂದಲೇ ಸಾಮಾಜಿಕ ಜಾಲತಾಣ ಅಲ್ಲೋಲಕಲ್ಲೋಲವಾಗಿದೆ. ಜನವರಿ 8ರಂದು ಯಶ್ ಜನ್ಮದಿನದ ಅಂಗವಾಗಿ ಬಿಡುಗಡೆಗೊಂಡ ಈ ಟೀಸರ್, ಬಿಡುಗಡೆಯಾದ ಒಂದೇ ಗಂಟೆಯಲ್ಲಿ ಒಂದು ಮಿಲಿಯನ್ ವೀಕ್ಷಣೆಗಳನ್ನು ದಾಖಲಿಸಿ ಗಮನ ಸೆಳೆದಿದೆ.

ಟೀಸರ್‌ನಲ್ಲಿ ಯಶ್ ಹಾಲಿವುಡ್ ಆ್ಯಕ್ಷನ್ ಹೀರೋ ಶೈಲಿಯಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಟೋನ್ ಮತ್ತು ಮೇಕಿಂಗ್ ಅಂತಾರಾಷ್ಟ್ರೀಯ ಮಟ್ಟದಲ್ಲಿದೆ ಎಂಬ ಸಂದೇಶ ನೀಡಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರಕ್ಕೆ ಯಶ್ ಸಹ ಕಥೆ ಬರೆಯುವಲ್ಲಿ ಕೈಜೋಡಿಸಿದ್ದಾರೆ. ನಾಯಕನ ಎಂಟ್ರಿ, ಆ್ಯಕ್ಷನ್ ದೃಶ್ಯಗಳು ಮತ್ತು ವಿಶುವಲ್ ಟ್ರೀಟ್ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ: FOOD | ಕ್ರಿಸ್ಪಿ ಫ್ರೈಡ್ ಚಿಕನ್ ಮೊಮೊಸ್‌ ಸವಿದಿದ್ದೀರಾ? ಮನೆಯಲ್ಲೇ ಮಾಡಿ ಈ ಸಿಂಪಲ್ ರೆಸಿಪಿ

ಯೂಟ್ಯೂಬ್‌ನಲ್ಲಿ ಮಾತ್ರವಲ್ಲದೆ ಇತರೆ ಪ್ಲಾಟ್‌ಫಾರ್ಮ್‌ಗಳಲ್ಲೂ ಟೀಸರ್ ವೀಕ್ಷಣೆಗಳು ವೇಗವಾಗಿ ಏರುತ್ತಿವೆ. ಕೆಲ ನಿಮಿಷಗಳಿಗೊಮ್ಮೆ ವೀಕ್ಷಣೆ ಸಂಖ್ಯೆ ಬದಲಾಗುತ್ತಿದ್ದು, ಯಶ್ ಕ್ರೇಜ್ ಇನ್ನೂ ಜನರ ಮನಸಲ್ಲಿ ಉಳಿದಿದೆ ಅನ್ನೋದನ್ನು ಇದು ಸ್ಪಷ್ಟಪಡಿಸುತ್ತದೆ.

‘ಕೆಜಿಎಫ್’ ಮೂಲಕ ಪ್ಯಾನ್ ಇಂಡಿಯಾ ಮಟ್ಟ ತಲುಪಿದ್ದ ಯಶ್, ‘ಟಾಕ್ಸಿಕ್’ ಮೂಲಕ ಜಾಗತಿಕ ಸಿನಿಮಾರಂಗದತ್ತ ಹೆಜ್ಜೆ ಇಡುತ್ತಿದ್ದಾರೆ ಎಂಬ ಅಭಿಪ್ರಾಯ ಅಭಿಮಾನಿಗಳಲ್ಲಿದೆ. ಮಾರ್ಚ್ 19ರಂದು ಸಿನಿಮಾ ಬಿಡುಗಡೆಗೊಳ್ಳಲಿದ್ದು, ಈಗಾಗಲೇ ಟೀಸರ್ ಯಶಸ್ಸು ಚಿತ್ರದ ಮೇಲೆ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

error: Content is protected !!