ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಲಾಲ್‌ಬಾಗ್ ಸಸ್ಯ ಉದ್ಯಾನದ ಹೊರಗಡೆ ಬೆಳಗಿನ ಜಾವ ಕಾಣಿಸುವ ಒಬ್ಬ ಸಾಮಾನ್ಯ ವ್ಯಾಪಾರಿಯ ಕಥೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದೋಸೆ–ಇಡ್ಲಿ ಬ್ಯಾಟರ್ ಮಾರುವ ರಾಜು ಎಂಬ ವ್ಯಕ್ತಿಯ ಜೀವನದ ಪರಿಶ್ರಮವನ್ನು ಸಂದೀಪ್ ಆರ್. ಎನ್ನುವವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಪ್ರತಿದಿನ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಲಾಲ್‌ಬಾಗ್ ಬಳಿ ಚಿಕ್ಕ ಅಂಗಡಿ ಹಾಕಿ ತಾಜಾ ಬ್ಯಾಟರ್ ಮಾರುವ ರಾಜು, ನಂತರ ನೇರವಾಗಿ ತನ್ನ ಉದ್ಯೋಗಕ್ಕೆ ತೆರಳುತ್ತಾರಂತೆ. ವರ್ಷಗಳಿಂದ ಇದೇ ಶಿಸ್ತು, ಇದೇ ದುಡಿಮೆ ಯಾವುದೇ ಅಸಮಾಧಾನವಿಲ್ಲದೆ ಅವರು ಬದುಕು ಸಾಗಿಸುತ್ತಿದ್ದಾರೆ.
ಇದನ್ನೂ ಓದಿ: Rice series 10 | ಬಿಸಿ ಬಿಸಿ ಅನ್ನಕ್ಕೆ ರುಚಿಯಾದ ಈರುಳ್ಳಿ ಗೊಜ್ಜು, ಟೇಸ್ಟ್ ಮಾತ್ರ ಅದ್ಭುತ
ಈ ಪರಿಶ್ರಮದ ಹಿಂದಿರೋ ಗುರಿ ಒಂದೇ, ಮಗಳ ಶಿಕ್ಷಣ. ಇದೇ ನಿಯತ್ತಿನ ದುಡಿಮೆಯಿಂದ ರಾಜು ತಮ್ಮ ಮಗಳನ್ನು ಓದಿಸಿದ್ದಾರಂತೆ. ಇಂದು ಆಕೆ ಎಂಎನ್‌ಸಿ ಬಯೋಟೆಕ್ ಕಂಪನಿಯಲ್ಲಿ ಕೆಲಸ ಮಾಡುವ ಮಾಸ್ಟರ್ಸ್ ಪದವೀಧರೆ ಎಂದು ಸಂದೀಪ್ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಗೆ ಅನೇಕರು ಸ್ಥಳೀಯ ಆಹಾರ ವ್ಯಾಪಾರಿಗಳಿಗೆ ಬೆಂಬಲ ನೀಡುವ ತಮ್ಮದೇ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇದು ದಾನವಲ್ಲ, ನಿರಂತರ ಪರಿಶ್ರಮಕ್ಕೆ ನೀಡುವ ಗೌರವ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

