Sunday, January 11, 2026

ಹೂಡಿಕೆ ಒಂದೇ ಬಾರಿ, ಲಾಭ ಜೀವನಪರ್ಯಂತ! LICಯಿಂದ ‘ಜೀವನ್ ಉತ್ಸವ್ ಸಿಂಗಲ್ ಪ್ರೀಮಿಯಂ’ ಆರಂಭ

ಹೊಸದಿಗಂತ ಬೆಂಗಳೂರು:

ಭಾರತೀಯ ಜೀವ ವಿಮಾ ನಿಗಮ (LIC) ಹೂಡಿಕೆದಾರರಿಗೆ ಹೊಸದೊಂದು ಸುವರ್ಣ ಅವಕಾಶವನ್ನು ಹೊತ್ತು ತಂದಿದೆ. ‘ಎಲ್‌ಐಸಿ ಜೀವನ್ ಉತ್ಸವ್ ಸಿಂಗಲ್ ಪ್ರೀಮಿಯಂ’ (ಪ್ಲಾನ್ ಸಂಖ್ಯೆ: 883) ಹೆಸರಿನ ಈ ಹೊಸ ಯೋಜನೆಯು 2026ರ ಜನವರಿ 12 ರಿಂದ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಒಮ್ಮೆ ಮಾತ್ರ ಪ್ರೀಮಿಯಂ ಪಾವತಿಸಿ ಜೀವನಪರ್ಯಂತ ಲಾಭ ಪಡೆಯುವವರಿಗೆ ಇದು ಅತ್ಯುತ್ತಮ ಯೋಜನೆಯಾಗಿದೆ.

ವಿಶೇಷತೆಗಳೇನು?

ಈ ಯೋಜನೆಯು ನಾನ್-ಲಿಂಕ್ಡ್ ಮತ್ತು ನಾನ್-ಪಾರ್ಟಿಸಿಪೇಟಿಂಗ್ ಆಗಿದ್ದು, ಷೇರು ಮಾರುಕಟ್ಟೆಯ ಏರಿಳಿತಗಳಿಗೆ ಒಳಪಟ್ಟಿರುವುದಿಲ್ಲ. ಪ್ರಮುಖವಾಗಿ ಪ್ರತಿ ₹1,000 ವಿಮಾ ಮೊತ್ತಕ್ಕೆ ₹40 ಗ್ಯಾರಂಟಿ ಅಡಿಷನ್ (ಖಾತರಿ ಹೆಚ್ಚುವರಿ) ಪ್ರತಿ ವರ್ಷ ಪಾಲಿಸಿಗೆ ಸೇರ್ಪಡೆಯಾಗುವುದು ಇದರ ವಿಶೇಷ.

ಅರ್ಹತೆ ಮತ್ತು ಮಿತಿಗಳು
ವಯೋಮಿತಿ: 30 ದಿನಗಳ ಮಗುವಿನಿಂದ ಹಿಡಿದು 65 ವರ್ಷದ ವಯಸ್ಕರವರೆಗೆ ಯಾರು ಬೇಕಾದರೂ ಈ ಪಾಲಿಸಿ ಪಡೆಯಬಹುದು.

ಕನಿಷ್ಠ ವಿಮಾ ಮೊತ್ತ: ₹5 ಲಕ್ಷ.

ಗರಿಷ್ಠ ವಿಮಾ ಮೊತ್ತ: ಯಾವುದೇ ಮಿತಿ ಇಲ್ಲ (ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹೂಡಿಕೆ ಮಾಡಬಹುದು).

ಪಾಲಿಸಿದಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಎರಡು ರೀತಿಯ ಆದಾಯದ ಆಯ್ಕೆಗಳನ್ನು ಆರಿಸಿಕೊಳ್ಳಬಹುದು:

ಆಯ್ಕೆ 1 (ರೆಗ್ಯುಲರ್ ಇನ್‌ಕಮ್): ಪಾಲಿಸಿ ಆರಂಭವಾದ 7 ರಿಂದ 17 ವರ್ಷಗಳ ನಂತರ ಪ್ರತಿ ವರ್ಷದ ಕೊನೆಯಲ್ಲಿ ವಿಮಾ ಮೊತ್ತದ ಶೇ. 10 ರಷ್ಟು ಹಣವನ್ನು ಖಾಯಂ ಆಗಿ ಪಡೆಯಬಹುದು.

ಆಯ್ಕೆ 2 (ಫ್ಲೆಕ್ಸಿ ಇನ್‌ಕಮ್): ಈ ಆಯ್ಕೆಯಲ್ಲಿ ಶೇ. 10 ರಷ್ಟು ಆದಾಯವನ್ನು ನೀವು ಪಡೆಯಬಹುದು ಅಥವಾ ಎಲ್‌ಐಸಿಯಲ್ಲೇ ಉಳಿಸಬಹುದು. ಹೀಗೆ ಉಳಿಸಿದ ಹಣಕ್ಕೆ ಎಲ್‌ಐಸಿ ವಾರ್ಷಿಕ ಶೇ. 5.5 ರಷ್ಟು ಬಡ್ಡಿ ನೀಡುತ್ತದೆ.

ಇತರ ಪ್ರಮುಖ ಲಾಭಗಳು
ಡೆತ್ ಬೆನಿಫಿಟ್: ಪಾಲಿಸಿದಾರರು ಅಕಾಲಿಕ ಮರಣ ಹೊಂದಿದರೆ, ನಾಮಿನಿಗೆ ವಿಮಾ ಮೊತ್ತದ 1.25 ಪಟ್ಟು ಹಣ ಮತ್ತು ಅದರೊಂದಿಗೆ ಜಮೆಯಾದ ಗ್ಯಾರಂಟಿ ಅಡಿಷನ್‌ಗಳನ್ನು ನೀಡಲಾಗುತ್ತದೆ.

ಮೆಚ್ಯೂರಿಟಿ: ಪಾಲಿಸಿಯ ಅವಧಿ ಮುಗಿದಾಗ ವಿಮಾ ಮೊತ್ತದೊಂದಿಗೆ ಎಲ್ಲಾ ಬೋನಸ್‌ಗಳನ್ನು ನೀಡಲಾಗುತ್ತದೆ.

ಸಾಲದ ಸೌಲಭ್ಯ: ತುರ್ತು ಹಣದ ಅವಶ್ಯಕತೆ ಇದ್ದಲ್ಲಿ ಪಾಲಿಸಿಯ ಮೇಲೆ ಸಾಲ ಪಡೆಯುವ ಅವಕಾಶವಿದೆ.

ಹೆಚ್ಚುವರಿ ರಕ್ಷಣೆ: ಅಪಘಾತ ಮರಣ ಮತ್ತು ಅಂಗವೈಕಲ್ಯಕ್ಕಾಗಿ ಪ್ರತ್ಯೇಕ ‘ರೈಡರ್ಸ್’ ಸೌಲಭ್ಯವನ್ನೂ ಪಡೆದುಕೊಳ್ಳಬಹುದು.

ಒಟ್ಟಾರೆಯಾಗಿ, ಕುಟುಂಬದ ಆರ್ಥಿಕ ಭದ್ರತೆ ಮತ್ತು ನಿಯಮಿತ ಆದಾಯ ಎರಡನ್ನೂ ಬಯಸುವವರಿಗೆ ‘ಜೀವನ್ ಉತ್ಸವ್ ಸಿಂಗಲ್ ಪ್ರೀಮಿಯಂ’ ಒಂದು ಭರವಸೆಯ ಯೋಜನೆಯಾಗಿದೆ.

ಗ್ರಾಹಕರು ಈ ಯೋಜನೆಯನ್ನು ಈ ಕೆಳಗಿನ ಮಾರ್ಗಗಳ ಮೂಲಕ ಸುಲಭವಾಗಿ ಪಡೆಯಬಹುದು:

ಆಫ್‌ಲೈನ್ ಮೂಲಕ: ಎಲ್.ಐ.ಸಿ ಏಜೆಂಟ್‌ಗಳು, ಕಾರ್ಪೊರೇಟ್ ಏಜೆಂಟ್‌ಗಳು, ಬ್ರೋಕರ್‌ಗಳು ಮತ್ತು ಇನ್ಶೂರೆನ್ಸ್ ಮಾರ್ಕೆಟಿಂಗ್ ಫರ್ಮ್‌ಗಳ ಮೂಲಕ ಖರೀದಿಸಬಹುದು.

ಆನ್‌ಲೈನ್ ಮೂಲಕ: ಎಲ್.ಐ.ಸಿ ಅಧಿಕೃತ ವೆಬ್‌ಸೈಟ್ www.licindia.in ಗೆ ಭೇಟಿ ನೀಡುವ ಮೂಲಕ ನೇರವಾಗಿ ಖರೀದಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಎಲ್.ಐ.ಸಿ ಕೇಂದ್ರ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕರನ್ನು (CC) ಸಂಪರ್ಕಿಸಬಹುದು ಅಥವಾ [email protected] ಗೆ ಇಮೇಲ್ ಮಾಡಬಹುದು.

error: Content is protected !!