Sunday, January 11, 2026

ರಾಜ್ಯ ರಾಜಕೀಯಕ್ಕೆ ಮತ್ತೆ ಎಂಟ್ರಿ ಕೊಡ್ತಿದ್ದಾರಾ ಕುಮಾರಸ್ವಾಮಿ? ಫ್ಯಾನ್ಸ್‌ ವಿಡಿಯೋ ರಿಲೀಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

2028 ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜ್ಯದ ಹಲವು ಘಟಾನುಘಟಿ ನಾಯಕರು ಈಗಿನಿಂದಲೇ ತಯಾರಿ ಶುರು ಮಾಡಿದ್ದಾರೆ. ಯಾವ ಕ್ಷೇತ್ರದಲ್ಲಿ ತಾವು ಚುನಾವಣೆಗೆ ಸ್ಪರ್ಧಿಸಿದ್ರೆ ಒಳಿತು? ರಣತಂತ್ರ ಹೇಗಿರಬೇಕು? ಎಂಬ ಬಗ್ಗೆ ಲೆಕ್ಕಾಚಾರಗಳು ಜೋರಾಗಿ ನಡೆಯುತ್ತಿವೆ.

ಈ ಸಾಲಿನಲ್ಲಿ ಈಗಾಗಲೇ ಬಿಜೆಪಿಯ ಪ್ರತಾಪ್​​ ಸಿಂಹ, ಸುಮಲತಾ ಅಂಬರೀಷ್‌ ಹಾಗೂ ನಿಖಿಲ್‌ ಕುಮಾರಸ್ವಾಮಿ ಅವರ ಹೆಸರು ಕೇಳಿಬರ್ತಿದೆ. ಇದರ ಜೊತೆಗೆ ಹೆಚ್‌.ಡಿ ಕುಮಾರಸ್ವಾಮಿ ಮತ್ತೆ ರಾಜ್ಯ ರಾಜಕೀಯಕ್ಕೆ ರಿಟರ್ನ್‌ ಆಗ್ತಾರೆ ಅನ್ನೋ ದೊಡ್ಡ ಸುಳಿವು ಕೂಡ ಸಿಕ್ಕಿದೆ.

ಇದನ್ನೂ ಓದಿ: ಬಿಸಿ ನೀರು ಕುಡಿಯುವ ಅಭ್ಯಾಸವಿದೆಯೇ? ಹಾಗಾದ್ರೆ ಈ ಅದ್ಭುತ ಬದಲಾವಣೆಗಳಿಗೆ ಸಿದ್ಧರಾಗಿ!

ʻಟಾಕ್ಸಿಕ್‌ʼ ಸಿನಿಮಾ ಟೀಸರ್‌ ಮಾದರಿಯಲ್ಲೇ ಹೆಚ್‌ಡಿಕೆ ಕುರಿತು ಅಭಿಮಾನಿಗಳು ʻಡ್ಯಾಡಿ ಈಸ್ ಹೋಮ್ʼ ಎಐ ಟೀಸರ್ ರಿಲೀಸ್‌ ಮಾಡಿದ್ದಾರೆ. ಈ ಮೂಲಕ ಮತ್ತೆ ರಾಜ್ಯ ರಾಜಕಾರಣ ಎಂಟ್ರಿಯ ಸುಳಿವು ಕೊಟ್ಟಿದ್ದು, ಹೊಸ ದಾಳ ಉರುಳಿಸಿದ್ದಾರೆ. ಹಾಗಿದ್ರೆ ಕುಮಾರಸ್ವಾಮಿ 2027ರ ವರ್ಷಾರಂಭದಲ್ಲಿ ಬರ್ತಾರಾ? ಅಥವಾ 2026ರಲ್ಲೇ ರಾಜ್ಯ ರಾಜಕೀಯ ಪ್ರವೇಶ ಮಾಡ್ತಾರಾ ಎಂಬುದನ್ನ ಕಾದುನೋಡಬೇಕಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!