ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಯ ರಾಮ ಮಂದಿರ ಸಂಕೀರ್ಣದಲ್ಲಿ ನಮಾಜ್ ಮಾಡಲು ಯತ್ನಿಸಿದ ಕಾಶ್ಮೀರಿ ಮೂಲದ ವ್ಯಕ್ತಿಯೊರ್ವನನ್ನು ಭದ್ರತಾ ಪಡೆಗಳು ಬಂಧಿಸಿವೆ.
ಕಾಶ್ಮೀರಿ ಉಡುಪನ್ನು ಧರಿಸಿ ರಾಮ ಮಂದಿರದ ಗೇಟ್ ಡಿ1 ಮೂಲಕ ಪ್ರವೇಶಿಸಿದ್ದ ಕಾಶ್ಮೀರದ ಶೋಪಿಯಾನ್ ನಿವಾಸಿ ಅಹ್ಮದ್ ಶೇಖ್ ರಾಮ ಮಂದಿರ ಸಂಕೀರ್ಣದ ದಕ್ಷಿಣ ಗೋಡೆಯ ಪ್ರದೇಶದಲ್ಲಿರುವ ಸೀತಾ ರಸೋಯಿ ಬಳಿ ನಮಾಜ್ ಮಾಡಲು ಪ್ರಯತ್ನಿಸಿದ್ದನು. ಭದ್ರತಾ ಸಿಬ್ಬಂದಿ ಆತನನ್ನು ತಡೆದು ಎಳೆದುಕೊಂಡು ಹೋಗಿದ್ದಾರೆ.
ಘಟನೆ ವರದಿಯಾದ ತಕ್ಷಣ, ಗುಪ್ತಚರ ಸಂಸ್ಥೆಗಳು, ಸ್ಥಳೀಯ ಪೊಲೀಸರು ಮತ್ತು ಹಿರಿಯ ಆಡಳಿತ ಅಧಿಕಾರಿಗಳು ವಿಚಾರಣೆ ಶುರು ಮಾಡಿದ್ದು ಅಹ್ಮದ್ ಶೇಖ್ ನನ್ನು ಪ್ರಶ್ನಿಸುತ್ತಿದ್ದಾರೆ. ಆತನ ಉದ್ದೇಶ ಹಾಗೂ ಹಿನ್ನೆಲೆಯ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ.
ಇಂದು ಬೆಳಿಗ್ಗೆ ಘಟನೆ ನಡೆದಿದೆ ಎಂದು ವರದಿಯಾಗಿದೆ. ಆದಾಗ್ಯೂ, ಜಿಲ್ಲಾಡಳಿತ ಈ ವಿಷಯದ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಈ ವಿಷಯದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ವದಂತಿಗಳು ಅಥವಾ ಕಾನೂನು ಸುವ್ಯವಸ್ಥೆಯ ಪರಿಸ್ಥಿತಿಯನ್ನು ತಡೆಗಟ್ಟಲು ಭದ್ರತಾ ಸಂಸ್ಥೆಗಳು ಪ್ರತಿಯೊಂದು ಅಂಶವನ್ನೂ ತನಿಖೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.


