ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ-ನೇಪಾಳ ಗಡಿಯ ಮೂಲಕ ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯಲ್ಲಿ, ವೀಸಾ ಮತ್ತು ಪಾಸ್‌ಪೋರ್ಟ್ ಇಲ್ಲದೆ ಭಾರತವನ್ನು ಪ್ರವೇಶಿಸಲು ಯತ್ನಿಸಿದ ಚೀನಿ ಮಹಿಳೆಯನ್ನು ಬಂಧಿಸಲಾಗಿದೆ.
ಭಾರತ-ನೇಪಾಳ ಗಡಿಯನ್ನು ಯಾವುದೇ ವೀಸಾ ಇಲ್ಲದೆ, ದೇಶದ ಒಳಗೆ ನುಸುಳಿದ್ದು, ಈ ಮಹಿಳೆಯನ್ನು ಹುಯಾಜಿಯಾ ಜಿ ಎಂದು ಗುರುತಿಸಲಾಗಿರುವ ಈ ಮಹಿಳೆ ಉ.ಪ್ರದೇಶದ ಮಹಾರಾಜ್‌ಗಂಜ್ ಬೈರಿಯಾ ಬಜಾರ್ ಬಳಿ ಪಾದಚಾರಿ ಮಾರ್ಗದಿಂದ ಭಾರತಕ್ಕೆ ಪ್ರವೇಶಿಸುತ್ತಿದ್ದಾಗ ಪತ್ತೆಯಾಗಿದ್ದಾಳೆ.
ಯಾವುದೇ ಮಾನ್ಯ ವೀಸಾ ದಾಖಲೆಗಳಿಲ್ಲದೆ, ಪ್ರಯಾಣ ನಡೆಸುತ್ತಿದ್ದ ಈಕೆಯನ್ನು ಸಶಸ್ತ್ರ ಸೀಮಾ ಬಲ್ (SSB) ಪಡೆಯ ಅಧಿಕಾರಿಗಳು ಬಂಧಿಸಿದ್ದು, ನಂತರ ಈಕೆಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಈ ಕುರಿತು ಮಾತನಾಡಿರುವ ನೌತನ್ವಾ ಠಾಣೆಯ ಅಧಿಕಾರಿ ಪುರುಷೋತ್ತಮ ರಾವ್ ಮಹಿಳೆಯ ಬಳಿ ದೊರೆತ ಚೀಟಿಯ ಆಧಾರದ ಮೇಲೆ ಈಕೆ ಚೀನಿ ಪ್ರಜೆಯೆಂದು ಗುರುತಿಸಲಾಗಿದೆ. ಸದ್ಯ ಹುಯಾಜಿಯಾ ಜಿ ಎಂಬ ಈ ಮಹಿಳೆಯನ್ನು ಬಂಧಿಸಿ ತನಿಖೆಗೊಳಪಡಿಸಿಲಾಗಿದೆ. ಆದರೆ ಭಾಷಾ ಸಮಸ್ಯೆಯಿಂದಾಗಿ, ಆಕೆಯ ಕಡೆಯಿಂದ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ಹಾಗಾಗಿ ಹೆಚ್ಚಿನ ತನಿಖೆ ಬಳಿಕ ಆಕೆಯ ಮೂಲ ಯಾವುದು ಮತ್ತು ಭಾರತಕ್ಕೆ ಯಾವುದೇ ಮಾನ್ಯ ದಾಖಲೆಗಳಿಲ್ಲದೆ ಭೇಟಿ ನೀಡಿರುವ ಉದ್ದೇಶವೇನು ಎಂಬುದರ ಕುರಿತು ಮಾಹಿತಿ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.

