ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಭಾರತವನ್ನು ಕಂಗೆಡಿಸುತ್ತಿರುವ ತೀವ್ರ ಶೀತಗಾಳಿಯ ನಡುವೆಯೇ, ಒಂಬತ್ತು ವರ್ಷದ ಬಾಲಕಿಯೊಬ್ಬಳ ಭಕ್ತಿ ಮತ್ತು ಧೈರ್ಯ ಎಲ್ಲರ ಗಮನ ಸೆಳೆದಿದೆ. ಫಿರೋಜಾಬಾದ್ ಜಿಲ್ಲೆಯ ಶಿಕೋಹಾಬಾದ್ ನಿವಾಸಿ ವಂಶಿಕಾ ಯಾದವ್, ಚಳಿಯ ತೀವ್ರತೆಯನ್ನು ಲೆಕ್ಕಿಸದೆ ಆರು ದಿನಗಳ ಕಾಲ ಸ್ಕೇಟಿಂಗ್ ಮಾಡಿ ಸುಮಾರು 450 ಕಿಲೋಮೀಟರ್ ದೂರವನ್ನು ದಾಟಿ ಅಯೋಧ್ಯೆ ತಲುಪಿದ್ದಾಳೆ.
ಜನವರಿ 3ರಂದು ತನ್ನ ಪ್ರಯಾಣ ಆರಂಭಿಸಿದ ವಂಶಿಕಾ, ಹೆದ್ದಾರಿ, ಒಳರಸ್ತೆ ಹಾಗೂ ಕಿರಿದಾದ ಮಾರ್ಗಗಳಲ್ಲಿ ಸ್ಕೇಟಿಂಗ್ ಮೂಲಕ ಮುಂದುವರಿದು ಶುಕ್ರವಾರ ಅಯೋಧ್ಯೆ ತಲುಪಿದ್ದಾಳೆ. ಹವಾಮಾನ ಮತ್ತು ದೂರದ ಸವಾಲುಗಳ ನಡುವೆಯೂ ಅವಳು ತನ್ನ ಗುರಿಯಿಂದ ಹಿಂದೆ ಸರಿಯಲಿಲ್ಲ.
ಇದನ್ನೂ ಓದಿ: FOOD | ಮನೆಮಂದಿಯ ಫೇವರೆಟ್ ಹನಿ ಚಿಲ್ಲಿ ಪೊಟೇಟೊ! ಇಲ್ಲಿದೆ ಸಿಂಪಲ್ ರೆಸಿಪಿ
ಬಾಲಕಿಯ ಸುರಕ್ಷತೆಗಾಗಿ ತಂದೆ ಶಿವಶಂಕರ್ ಯಾದವ್ ಹಾಗೂ ಚಿಕ್ಕಪ್ಪ ಕಾರಿನಲ್ಲಿ ಅವಳನ್ನು ಹಿಂಬಾಲಿಸುತ್ತಿದ್ದರು. ಅಯೋಧ್ಯೆ ತಲುಪಿದ ನಂತರ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವತಿಯಿಂದ ವಂಶಿಕಾಳಿಗೆ ಸ್ವಾಗತಿಸಲಾಯಿತು. ರಾಮ ಲಲ್ಲಾ ದರ್ಶನ ಪಡೆದು ರಾಮ ದರ್ಬಾರ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದ ಕ್ಷಣ ಆಕೆಗೆ ವಿಶೇಷವಾಗಿತ್ತು.

