ಇತ್ತೀಚಿನ ದಿನಗಳಲ್ಲಿ ಎಣ್ಣೆ ಕಡಿಮೆ ಬಳಸಿ ಆರೋಗ್ಯಕರ ಅಡುಗೆ ಮಾಡಬಹುದು ಅನ್ನೋ ಕಾರಣಕ್ಕೆ ಏರ್ ಫ್ರೈಯರ್ ಎಲ್ಲರ ಮನೆಮನೆಗೆ ಪ್ರವೇಶಿಸಿದೆ. ಫ್ರೆಂಚ್ ಫ್ರೈಸ್‌ನಿಂದ ಹಿಡಿದು ಸ್ನ್ಯಾಕ್ಸ್, ತರಕಾರಿ, ಬೇಕರಿ ಎಲ್ಲವೂ ಇದ್ರಲ್ಲೇ ಮಾಡೋ ಅಭ್ಯಾಸ ಬೆಳೆದಿದೆ. ಆದ್ರೆ ಸರಿಯಾದ ವಿಧಾನ ಗೊತ್ತಿಲ್ಲದೆ ಬಳಸಿದ್ರೆ, ರುಚಿಯೇ ಹಾಳಾಗಬಹುದು. ಕೆಲವೊಂದು ಸಾಮಾನ್ಯ ತಪ್ಪುಗಳು ಆಹಾರ ಸರಿಯಾಗಿ ಬೇಯದಂತೆ ಮಾಡೋದರ ಜೊತೆಗೆ, ಏರ್ ಫ್ರೈಯರ್ ಬಾಳಿಕೆಗೂ ಹಾನಿ ಮಾಡಬಹುದು.
ಏರ್ ಫ್ರೈಯರ್‌ನಲ್ಲಿ ಅಡುಗೆ ಮಾಡುವಾಗ ಈ ತಪ್ಪು ಮಾಡ್ಬೇಡಿ:
ಏರ್ ಫ್ರೈಯರ್ ಕೂಡ ಓವನ್ ತರಹ ಪ್ರೀಹೀಟ್ ಬೇಕಾಗುತ್ತೆ. ಪ್ರೀಹೀಟ್ ಮಾಡದೇ ಆಹಾರ ಹಾಕಿದ್ರೆ, ಹೊರಗೆ ಸುಟ್ಟು ಒಳಗೆ ಹಸಿಯಾಗಿರುವ ಸಾಧ್ಯತೆ ಇರುತ್ತೆ.
ಒಂದೇ ಬಾರಿ ತುಂಬಾ ಆಹಾರ ಹಾಕಿದ್ರೆ, ಗಾಳಿಯ ಹರಿವು ಸರಿಯಾಗಿ ಆಗೋದಿಲ್ಲ. ಇದರಿಂದ ಆಹಾರ ಸಮವಾಗಿ ಬೇಯೋದಿಲ್ಲ.
ಏರ್ ಫ್ರೈಯರ್ ಅಂದ್ರೆ ಎಣ್ಣೆ ಬೇಡ ಅಂತಲ್ಲ. ಸ್ವಲ್ಪ ಎಣ್ಣೆ ಬಳಿಸಿದ್ರೆ ಆಹಾರ ಕ್ರಿಸ್ಪಿಯಾಗುತ್ತೆ. ಎಣ್ಣೆ ಬಳಸದೇ ಇದ್ದರೆ ಒಣಗಿದ ರುಚಿ ಬರುತ್ತೆ ಅಷ್ಟೆ.
ಬೇಯೋವಾಗ ಮಧ್ಯದಲ್ಲಿ ಒಮ್ಮೆ ಆಹಾರವನ್ನು ತಿರುಗಿಸಬೇಕು. ಹಾಗೆ ಮಾಡದೇ ಇದ್ದರೆ ಒಂದು ಬದಿ ಮಾತ್ರ ಚೆನ್ನಾಗಿ ಬೇಯುತ್ತೆ.
ಪ್ರತಿ ಆಹಾರಕ್ಕೂ ಬೇರೆ ಬೇರೆ ತಾಪಮಾನ ಬೇಕಾಗುತ್ತೆ. ಹೆಚ್ಚು ತಾಪಮಾನದಲ್ಲಿ ಹಾಕಿದ್ರೆ ಆಹಾರ ಸುಡುವ ಸಾಧ್ಯತೆ ಜಾಸ್ತಿ. ಕಡಿಮೆ ಮಾಡಿದ್ರೆ ಬೇಯೋದಿಲ್ಲ. ಹೀಗಾಗಿ ಸರಿಯಾಗಿ ನೋಡಿ ತಾಪಮಾನ ಇಟ್ಟುಕೊಳ್ಳಿ
ಎಣ್ಣೆ ಮತ್ತು ಆಹಾರದ ಕಣಗಳು ಜಮಾವಣೆಯಾದ್ರೆ ದುರ್ವಾಸನೆ ಬರುತ್ತದೆ ಮತ್ತು ಯಂತ್ರದ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಹೀಗಾಗಿ ಬಳಸಿದ ನಂತರ ತೊಳೆಯಲೇ ಬೇಕು.

