Monday, January 12, 2026

ಆರೋಪಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆಯಾದ್ರೂ ಮನೆಯೂಟ ತಿನ್ನುವ ಭಾಗ್ಯ ಬಂತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿ ಪವಿತ್ರಾ ಜೈಲಿನಲ್ಲಿದ್ದಾರೆ. ಜೈಲಿನ ಊಟ ಸೇರುತ್ತಿಲ್ಲ ಎಂದು ಆಗಾಗ್ಗೆ ಹೇಳುತ್ತಲೇ ಇದ್ದಾರೆ. ಇದೀಗ ಪವಿತ್ರಾಗೆ ಮನೆಯೂಟ ತಿನ್ನುವ ಭಾಗ್ಯ ಬಂದಿದೆ.

ಪವಿತ್ರಾ ಗೌಡಗೆ ವಾರಕ್ಕೊಮ್ಕೆ ಮನೆಯೂಟ ನೀಡುವಂತೆ ಕೋಟ್ ಅವಕಾಶ ನೀಡಿದೆ. ಇಂದು (ಜ.12) ಆರೋಪಿ ಪವಿತ್ರಾ ಗೌಡಗೆ ಮನೆಯೂಟ ನೀಡುವ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ವಾರಕ್ಕೊಮ್ಮೆ ಮನೆಯೂಟ ನೀಡುವಂತೆ ಸೂಚಿಸಿದೆ. ಜೊತೆಗೆ ಆರೋಗ್ಯದಲ್ಲಿ ವ್ಯತ್ಯಾಸವಾದ್ರೆ ವೈದ್ಯರ ಸಲಹೆ ಮೇರೆಗೆ ಊಟ ನೀಡಬೇಕು ಎಂದು ತಿಳಿಸಿದೆ. 

ಈ ಮೊದಲು ಆರೋಪಿ ಪವಿತ್ರಾ ಗೌಡ ಸೇರಿ ನಾಗರಾಜು, ಲಕ್ಷ್ಮಣ್ ಜೈಲಿನಲ್ಲಿ ಒಳ್ಳೆಯ ಊಟ ಇಲ್ಲ, ಇದರಿಂದ ಅನಾರೋಗ್ಯ ಉಂಟಾಗುತ್ತಿದೆ. ಹೀಗಾಗಿ ಮನೆಯೂಟಬೇಕೆಂದು ಕೋರ್ಡ್‌ಗೆ ಅರ್ಜಿ ಸಲ್ಲಿಸಿದ್ದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಮೂವರಿಗೆ ದಿನಕ್ಕೊಂದು ಬಾರಿ ಮನೆಯೂಟ ನೀಡಲು ಅವಕಾಶ ನೀಡಿತ್ತು. ಆದರೆ ಕಾರಾಗೃಹ ಇಲಾಖೆ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಿಗೆ ಈ ರೀತಿಯಲ್ಲಿ ಮನೆ ಊಟವನ್ನು ನೀಡಿದರೆ ಮುಂದೆ ಎಲ್ಲಾ ಆರೋಪಿಗಳು ಇದೇ ಆದೇಶದ ಮೇಲೆ ಮನೆ ಊಟವನ್ನು ಕೇಳುವ ಸಾಧ್ಯತೆ ಇರುವುದರಿಂದ ಮನೆ ಊಟ ನೀಡುವುದಿಲ್ಲ ಎಂದು ತಿಳಿಸಿದ್ದರು.

ಮನೆ ಊಟ ಬಂದರೆ ಪರಿಶೀಲನೆ ಮಾಡಿದ ಬಳಿಕ ಜೈಲಿನ ಒಳಗೆ ಕೊಡಬೇಕಾಗುತ್ತದೆ. ಅದಕ್ಕಾಗಿಯೇ ಪ್ರತ್ಯೇಕವಾಗಿ ತಂಡ ಬೇಕಾಗುತ್ತದೆ. ಪರಪ್ಪನ ಅಗ್ರಹಾರದಲ್ಲಿ ಇರುವ 3 ಸಾವಿರ ಆರೋಪಿಗಳು ಇದೇ ಆದೇಶದ ಮೇಲೆ ಅರ್ಜಿ ಹಾಕಿದ್ದರೆ ಕಷ್ಟ ಆಗುತ್ತದೆ. ಹೀಗಾಗಿ ಮನೆ ಊಟ ನೀಡಲು ಸಾಧ್ಯವಿಲ್ಲ ಎಂದು ಕಾರಾಗೃಹ ಇಲಾಖೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

ಆದರೆ ಪವಿತ್ರಾ ಪರ ವಕೀಲರು ನನ್ನ ಕ್ಲೈಂಟ್‌ಗೆ ಜೈಲಿನ ಊಟದಿಂದ ಆರೋಗ್ಯ ಸಮಸ್ಯೆ ಆಗುತ್ತಿದೆ. ಚರ್ಮದ ಸಮಸ್ಯೆಗಳಾಗಿವೆ, ಮೈತುಂಬಾ ಗುಳ್ಳೆಗಳಿವೆ. ಫುಡ್‌ ಪಾಯಿಸನಿಂಗ್‌ ಕೂಡ ಆಗಿದೆ. ಹೀಗಾಗಿ ಮನೆಯೂಟ ಕೊಡುವಂತೆ ಮನವಿ ಮಾಡಿದ್ದರು.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!