ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದೇಶದ ನೆಲದಲ್ಲೂ ಸ್ವದೇಶದ ಸುವಾಸನೆ ಉಳಿಸಿಕೊಂಡು ಬದುಕು ಕಟ್ಟಿಕೊಳ್ಳುವುದು ಸುಲಭದ ಕೆಲಸ ಅಲ್ಲ. ಆದರೆ ಬಿಹಾರದ ಯುವಕನೊಬ್ಬ ಲಾಸ್ ಏಂಜಲೀಸ್‌ನ ಬೀದಿಗಳಲ್ಲಿ ಚಾಯ್ ಮತ್ತು ಪೋಹಾ ಮಾರಾಟ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆದಿದ್ದಾನೆ. ಇತ್ತೀಚೆಗೆ ಲಂಡನ್‌ನಲ್ಲಿ ಸಮೋಸಾ ಮಾರಾಟ ಮಾಡಿ ವೈರಲ್ ಆಗಿದ್ದ ಬಿಹಾರಿ ವ್ಯಕ್ತಿಯ ಬಳಿಕ, ಇದೀಗ ಮತ್ತೊಬ್ಬ ಬಿಹಾರಿ ಯುವಕ ಅಮೆರಿಕದಲ್ಲಿ ಸುದ್ದಿಯಾಗಿದ್ದಾನೆ.
ಲಾಸ್ ಏಂಜಲೀಸ್‌ನ ರಸ್ತೆ ಬದಿಯಲ್ಲಿ ಚಹಾ ಮತ್ತು ಪೋಹಾ ಮಾರಾಟ ಮಾಡುವ ಈ ಯುವಕನ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿದೆ. ವಿದೇಶದಲ್ಲಿದ್ದರೂ, ಅವರು ಹಿಂದಿಯಲ್ಲಿ ಮಾತನಾಡುತ್ತಾರೆ, ತಮ್ಮ ಮೌಲ್ಯಗಳಲ್ಲಿ ಬದ್ಧರಾಗಿರುತ್ತಾರೆ ಮತ್ತು ತಮ್ಮ ಬಿಹಾರಿ ಗುರುತನ್ನು ಬಹಿರಂಗವಾಗಿ ಗೌರವಿಸುತ್ತಾರೆ. ₹782 ಬೆಲೆಯ ಅವರ ಚಹಾ ಮತ್ತು ₹1,512 ಬೆಲೆಯ ಪೋಹಾ ಕೇವಲ ಆಹಾರ ಪದಾರ್ಥಗಳಲ್ಲ – ಅವು ಜಾಗತಿಕ ನಗರದಲ್ಲಿ ಬದುಕುಳಿಯುವ ವೆಚ್ಚ ಮತ್ತು ತನ್ನ ಸ್ವಂತ ಪ್ರಯತ್ನದ ಮೂಲಕ ಪ್ರಾಮಾಣಿಕ ಜೀವನೋಪಾಯವನ್ನು ನಿರ್ಮಿಸುವ ಮನುಷ್ಯನ ದೃಢಸಂಕಲ್ಪವನ್ನು ಪ್ರತಿಬಿಂಬಿಸುತ್ತವೆ ಎಂಬ ಶೀರ್ಷಿಕೆಯ ಮೂಲಕ @indiaego ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾದ ಈ ಕ್ಲಿಪ್‌ಗೆ ಸಾವಿರಾರು ಲೈಕ್‌ಗಳು ಮತ್ತು ಲಕ್ಷಾಂತರ views ಸಿಕ್ಕಿವೆ. ಲಾಸ್ ಏಂಜಲೀಸ್‌ನಂತಹ ದುಬಾರಿ ನಗರದಲ್ಲಿ ಚಹಾ ಮತ್ತು ಪೋಹಾ ಮಾರಾಟ ಮಾಡುವುದು ಅಚ್ಚರಿಯ ಸಂಗತಿಯಾಗಿ ನೆಟ್ಟಿಗರ ಗಮನ ಸೆಳೆದಿದೆ.
ಈ ವಿಡಿಯೋಗೆ ಚಹಾ ಮತ್ತು ಪೋಹಾ ಕೇವಲ ಆಹಾರವಲ್ಲ, ಅದು ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದ ಸಂಕೇತ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.
ಲಂಡನ್‌ನ ‘ಬಿಹಾರಿ ಸಮೋಸಾ ಮ್ಯಾನ್’ ಬಳಿಕ, ಈಗ ಲಾಸ್ ಏಂಜಲೀಸ್‌ನ ಈ ‘ಚಾಯ್‌ವಾಲಾ’ ಕೂಡ ಇಂಟರ್ನೆಟ್ ಲೋಕದಲ್ಲಿ ಹೊಸ ವೈರಲ್ ಮುಖವಾಗಿ ಹೊರಹೊಮ್ಮಿದ್ದಾನೆ.



