ಪ್ರತಿಯೊಬ್ಬ ಹೆಣ್ಣಿನ ಮನಸ್ಸಿನೊಳಗೊಂದು ಮೌನವಾದ ಕನಸು ಖಂಡಿತ ಇರುತ್ತೆ. ತನ್ನ ಬದುಕಿನಲ್ಲಿ ನಿಜವಾದ ‘ರಿಯಲ್ ಮ್ಯಾನ್’ ಒಬ್ಬ ಬರಬೇಕು ಎಂಬ ಆಸೆ. ಆ ಕನಸಿನ ರಾಜಕುಮಾರನ ಬಗ್ಗೆ ಅಲ್ಲ, ಅರ್ಥಮಾಡಿಕೊಳ್ಳುವ, ಬೆಂಬಲಿಸುವ ಮತ್ತು ಜೊತೆಯಾಗಿ ನಿಲ್ಲುವ ವ್ಯಕ್ತಿಯ ಬಗ್ಗೆ. ಹಣ, ಹುದ್ದೆ ಅಥವಾ ಆಸ್ತಿ ಇಲ್ಲದಿದ್ದರೂ ಸಹ, ಮನಸ್ಸಿನ ಶ್ರೀಮಂತಿಕೆ ಇರುವ ಪುರುಷನೇ ನಿಜವಾದ ರಿಯಲ್ ಮ್ಯಾನ್ ಆಗಿರುತ್ತಾನೆ. ಅಂಥ ಸಂಗಾತಿ ಸಿಕ್ಕ ಮಹಿಳೆಯ ಬದುಕು ಕೇವಲ ಸುರಕ್ಷಿತವಾಗುವುದಲ್ಲ, ಸಂತೋಷದಿಂದ ಕೂಡಿರುತ್ತೆ.
ಜಂಟಲ್ ಮೆನ್ ಎಂದಿಗೂ “ನೀನು ಹೀಗೇ ಇರಬೇಕು” ಎಂದು ನಿಮ್ಮನ್ನು ಒಂದು ಚೌಕಟ್ಟಿನೊಳಗೆ ಹಾಕಲು ಪ್ರಯತ್ನಿಸುವುದಿಲ್ಲ. ಅವನು ನಿಮ್ಮ ವ್ಯಕ್ತಿತ್ವವನ್ನು ಗೌರವಿಸುತ್ತಾನೆ, ನಿಮ್ಮ ಸ್ವಾತಂತ್ರ್ಯವನ್ನು ಒಪ್ಪಿಕೊಳ್ಳುತ್ತಾನೆ.
ನಿಮ್ಮ ಕನಸುಗಳು ಅವನಿಗೆ ಭಾರವಾಗುವುದಿಲ್ಲ. ಅವುಗಳನ್ನು ತನ್ನದೇ ಕನಸಿನಂತೆ ನೋಡಿ, “ನೀನು ಸಾಧಿಸಬಲ್ಲೆ” ಎಂದು ನಿಮ್ಮ ಬೆನ್ನಿಗೆ ನಿಲ್ಲುತ್ತಾನೆ.
ಪ್ರೀತಿ ಎಂದರೆ ಪ್ರತಿಬಾರಿ ಸಾಬೀತುಪಡಿಸುವುದಲ್ಲ. ನಿಜವಾದ ಸಂಗಾತಿಗೆ ನಿಮ್ಮ ಮೇಲಿನ ನಂಬಿಕೆ ಗಟ್ಟಿಯಾಗಿರುತ್ತದೆ. ಸಂಶಯದಿಂದ ಬದುಕನ್ನು ನರಕ ಮಾಡುವ ಪುರುಷ ಜಂಟಲ್ ಮೆನ್ ಅಲ್ಲ.
ನೀನು ಭಯಪಡುವಾಗ, ಆತ್ಮವಿಶ್ವಾಸ ಕಳೆದುಕೊಂಡಾಗ ಉತ್ತಮವಾಗಲು ಪ್ರೋತ್ಸಾಹಿಸುವುದು ಸರಿ. ಆದರೆ ತನ್ನ ಸ್ವಾರ್ಥಕ್ಕಾಗಿ “ನೀನು ಬದಲಾಗಬೇಕು” ಎನ್ನುವವನು ಟಾಕ್ಸಿಕ್ ಸಂಬಂಧದ ಸಂಕೇತ.
ನೀವು ಮುಂದೆ ಸಾಗಿದಾಗ, ಸಾಧನೆ ಮಾಡಿದಾಗ ಅಸೂಯೆಪಡದೇ ಹೆಮ್ಮೆಪಡುವ ಮನಸ್ಸು ಅವನಲ್ಲಿರಬೇಕು. ನಿಮ್ಮ ಬೆಳವಣಿಗೆಯೇ ಅವನ ಸಂತೋಷ.
ಇಂಥ ಗುಣಗಳಿರುವ ಪುರುಷ ನಿಮ್ಮ ಬದುಕಿಗೆ ಬಂದಿದ್ದರೆ, ಅವರನ್ನು ಎಂದಿಗೂ ಲಘುವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ ಜಂಟಲ್ ಮೆನ್ ಸಿಗೋದು ಅಪರೂಪ, ಸಿಕ್ಕರೆ ಅದು ನಿಮ್ಮ ದೊಡ್ಡ ಭಾಗ್ಯ.


