Tuesday, January 13, 2026
Tuesday, January 13, 2026
spot_img

ಸಿದ್ದರಾಮಯ್ಯ ‘ದಿಲ್ಲಿ’ ಪ್ಲ್ಯಾನ್ ಚೇಂಜ್: ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್‌ಗೆ ಸಿಎಂ ವೇಟಿಂಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಕ್ರಾಂತಿ ಹಬ್ಬ ಮುಗಿಯುತ್ತಿದ್ದಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೆಹಲಿ ಪ್ರವಾಸ ಖಚಿತವಾಗಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ತಮ್ಮ ಭೇಟಿಯನ್ನು ಜನವರಿ 27ರ ನಂತರಕ್ಕೆ ಮುಂದೂಡಿದ್ದಾರೆ. ಹೈಕಮಾಂಡ್ ಭೇಟಿಗೆ ರಾಹುಲ್ ಗಾಂಧಿ ಅವರ ಲಭ್ಯತೆ ಮುಖ್ಯವಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಜ. 22ರಿಂದ 27ರವರೆಗೆ ರಾಹುಲ್ ಗಾಂಧಿ ಅವರು ಪ್ರವಾಸದಲ್ಲಿ ಇರಲಿದ್ದಾರೆ. ಅವರು ದೆಹಲಿಗೆ ಮರಳಿದ ನಂತರವಷ್ಟೇ ಅವರನ್ನು ಭೇಟಿ ಮಾಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ರಾಜ್ಯ ಬಜೆಟ್ ಮಂಡನೆಯ ಸಿದ್ಧತೆಗಳ ಬಗ್ಗೆ ಹೈಕಮಾಂಡ್‌ನಿಂದ ಅಗತ್ಯ ಸಲಹೆ ಹಾಗೂ ಅನುಮತಿ ಪಡೆಯುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ.

ಸಿಎಂ ಕಾರ್ಯಕ್ರಮಗಳ ಪಟ್ಟಿ:

ಜ. 18, 19: ಮೈಸೂರು ಜಿಲ್ಲಾ ಪ್ರವಾಸದಲ್ಲಿ ಸಿಎಂ ಬ್ಯುಸಿ.

ಜ. 20, 21: ವಿಶೇಷ ಅಧಿವೇಶನದ ಸಿದ್ಧತೆಗಳ ಬಗ್ಗೆ ಹೆಚ್ಚಿನ ಗಮನ.

ಜ. 27ರ ನಂತರ: ದೆಹಲಿ ಪ್ರವಾಸ ಮತ್ತು ಹೈಕಮಾಂಡ್ ನಾಯಕರೊಂದಿಗೆ ಚರ್ಚೆ.

Most Read

error: Content is protected !!