ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಶಂಕಿತ ಬಾಂಗ್ಲಾ ವಲಸಿಗರ ಪತ್ತೆ ಕಾರ್ಯಚರಣೆ ಮುಂದುವರಿದಿದ್ದು, ಆನೇಕಲ್ ಉಪವಿಭಾಗ ಪೊಲೀಸರು ಶಂಕಿತ ಅಕ್ರಮ ಬಾಂಗ್ಲಾ ವಲಸಿಗರು ಇದ್ದಂತಹ ಶೆಡ್ ಮೇಲೆ ದಾಳಿ ಮಾಡಿದ್ದಾರೆ.
ಆನೇಕಲ್ ಉಪ ವಿಭಾಗದಲ್ಲಿ 37 ಬಾಂಗ್ಲಾ ವಲಸಿಗರು ಪತ್ತೆಯಾಗಿದ್ದಾರೆ.
ಬನ್ನೇರುಘಟ್ಟ ವ್ಯಾಪ್ತಿಯಲ್ಲಿ 6 ಮಕ್ಕಳು ಸೇರಿ 20 ಜನ ಪತ್ತೆಯಾಗಿದ್ದರೆ. ಅತ್ತಿಬೆಲೆ ಠಾಣ ವ್ಯಾಪ್ತಿಯಲ್ಲಿ ಇಬ್ಬರು ಬಾಂಗ್ಲಾ ವಲಸಿಗರು ಪತ್ತೆಯಾಗಿದ್ದಾರೆ. ಆನೇಕಲ್ ಠಾಣ ವ್ಯಾಪ್ತಿಯಲ್ಲಿ 15 ಬಾಂಗ್ಲಾ ವಲಸಿಗರನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ನಕಲಿ ಪಾಸ್ ಪೋರ್ಟ್ ಮತ್ತು ಆಧಾರ್ ಕಾರ್ಡ್ ಸೃಷ್ಟಿ ಮಾಡಿ ಬಂದಿರುವ ಆರೋಪ ಕೇಳಿ ಬಂದಿದೆ.
ಸ್ಕ್ರಾಪ್ ಗೋದಮಗಳ ಶಡ್ ಗಳಲ್ಲಿ ಬಾಂಗ್ಲಾ ವಲಸಿಗರು ವಾಸವಿದ್ದರು. ಅಲ್ಲದೆ ಕೆಲವು ವಲಸಿಗರು ಅಪಾರ್ಟ್ಮೆಂಟ್ಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ರಾತ್ರಿಯ ವೇಳೆ ಚಿಂದಿ ಆಯೋಗ ಕೆಲಸ ಮಾಡುತ್ತಿದ್ದ ಶಂಕಿತ ವಲಸಿಗರು. ಇದೀಗ ವಿದೇಶಿಯರ ನೋಂದಣಿ ಕಚೇರಿಗೆ ಪೊಲೀಸರು ಹಾಜರುಪಡಿಸಿದ್ದಾರೆ.


