Tuesday, January 13, 2026
Tuesday, January 13, 2026
spot_img

ಮೊಮ್ಮಕ್ಕಳಿಗೆ ಬುದ್ದಿವಾದ ಹೇಳಿದ್ದಕ್ಕೆ ಮಗನಿಂದಲೇ ವೃದ್ಧ ತಂದೆಗೆ ಚಾಕು ಇರಿತ

ಹೊಸ ದಿಗಂತ ವರದಿ,ಬೆಳಗಾವಿ :

ತಂದೆ ತಾಯಿ ದೇವರು ಸಮ ಅಂತಾರೆ ಆದರೆ ಇಲ್ಲೋಬ್ಬ ಪಾಪಿ ಮಗ ನನ್ನ ತಂದೆ. ಮೊಮ್ಮಕ್ಕಳಿಗೆ ಬುದ್ದಿವಾದ ಹೇಳಿದ್ದಕ್ಕೆ ಮಗನಿಂದಲೇ ವೃದ್ಧ ತಂದೆಗೆ ಚಾಕು ಇರಿದಿರುವ ಘಟನೆಯೊಂದು ಬೆಳಗಾವಿ ಜಿಲ್ಲೆಯ ಬೈಲಹೊಂಗ ತಾಲೂಕಿನಲ್ಲಿ ಮಂಗಳವಾರ ಬೆಳಗ್ಗಿಗೆ ಬಂದಿದೆ.

ಮಕ್ಕಳನ್ನು ಆಟವಾಡಿಸುವ ವಿಚಾರಕ್ಕೆ ತಂದೆ–ಮಗನ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಪುತ್ರನೇ ತಂದೆಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಬಸಯ್ಯ ಏಣಗಿಮಠ (62) ಅವರನ್ನು ತಕ್ಷಣವೇ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆ ಮುಂದುವರಿದಿದೆ.

ಪುತ್ರ ವಿಜಯ ಏಣಗಿಮಠ ಅಪ್ಪನಿಗೆ ಇರಿದ ಆರೋಪಿ. ಬಸಯ್ಯ ಏಣಗಿಮಠ ಅವರ ಇಬ್ಬರು ಮಕ್ಕಳು ಅಕ್ಕಪಕ್ಕದಲ್ಲೇ ವಾಸವಾಗಿದ್ದು, ಮೊಮ್ಮಕ್ಕಳನ್ನು ಆಟವಾಡಿಸುವ ವಿಚಾರದಲ್ಲಿ ಮೊದಲಿಗೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ನನ್ನ ಮಕ್ಕಳನ್ನು ಅಣ್ಣನ ಮನೆಗೆ ಕರೆದುಕೊಂಡು ಹೋಗಬೇಡ ಎಂದು ವಿಜಯ ಆಕ್ಷೇಪ ವ್ಯಕ್ತಪಡಿಸಿದ್ದಾನೆ.

ಮಗನ ವರ್ತನೆಗೆ ತಂದೆ ಬಸಯ್ಯ ಅವರು ಬುದ್ದಿವಾದ ಹೇಳಿದಾಗ, ಆಕ್ರೋಶಗೊಂಡ ವಿಜಯ ಚಾಕುವಿನಿಂದ ಇರಿದು ತಂದೆಯನ್ನು ಗಾಯಗೊಳಿಸಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬೈಲಹೊಂಗಲ ಪೊಲೀಸರು ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪುತ್ರ ವಿಜಯ ಏಣಗಿಮಠ ವಿರುದ್ದ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Most Read

error: Content is protected !!