ಹೊಸ ದಿಗಂತ ವರದಿ,ವಿಜಯಪುರ:
ದರೋಡೆ ಮಾಡಿದ ಆರೋಪಿಗೆ ಏಳು ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ನಗರದ 1ನೇ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಜಿಲ್ಲೆಯ ತಾಳಿಕೋಟೆ ಪಟ್ಟಣದ ಪತ್ತೆಪೂರ ಗ್ರಾಮದ ಶ್ರೀಶೈಲ ಹೊಸಮನಿ ಶಿಕ್ಷೆಗೆ ಒಳಗಾದ ಆರೋಪಿ.
ಆ. 28, 2022 ರಂದು ರಾತ್ರಿ 9.30 ಗಂಟೆಗೆ ಹುಲಿಬೆಂಚಿ ಕ್ರಾಸ್ ಬಳಿಯ ಬಸ್ ನಿಲ್ದಾಣದಲ್ಲಿ ನಿಂತಿದ್ದ ರೇಣುಕಾಬಾಯಿ ಲಮಾಣಿ, ರಮೇಶ ಲಮಾಣಿ ಎಂಬುವರಿಗೆ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆಗೈದು, 3,02,000 ಮೌಲ್ಯದ ಚಿನ್ನಾಭರಣ, ನಗದು, ವಾಚ್, ರಾಯಲ್ ಎನ್‌ಪಿಲ್ಡ್ ಬೈಕ್ ದರೋಡೆ ಮಾಡಿ ಪರಾರಿ ಆಗಿದ್ದ.
ಈ ಬಗ್ಗೆ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ವಿಜಯಪುರ 1ನೇ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಚ್.ಎ. ಮೋಹನ ಅವರು ಸಾಕ್ಷಿದಾರ ಪುರಾವೆ ಆಲಿಸಿ, ವಾದ ಪ್ರತಿವಾದ ಆಲಿಸಿ, ಆರೋಪಿ ಶ್ರೀಶೈಲ ಹೊಸಮನಿಗೆ 7 ವರ್ಷ ಕಠಿಣ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ 1 ನೇ ಅಧಿಕ ಸರ್ಕಾರಿ ಅಭಿಯೋಜಕರಾದ ವನಿತಾ ಎಸ್. ಇಟಗಿ ವಾದ ಮಂಡಿಸಿದ್ದಾರೆ.


