ಹೊಸ ದಿಗಂತ ವರದಿ,ಹೊನ್ನಾವರ:
ಹೊನ್ನಾವರದಲ್ಲಿ ತಾಲೂಕಿನ ಬೇರಂಕಿಯ ಶಾಲೆಯ ಸಮೀಪ ಹೆಜ್ಜೆನು ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊರ್ವ ಮೃತಪಟ್ಟ ಘಟನೆ ನಡೆದಿದೆ.
ಅನಿಲಗೋಡದ ನಿವಾಸಿ ಮಂಜುನಾಥ್ ಗಣಪ ಅಂಬಿಗ (೫೩) ಮೃತ ದುರ್ದೈವಿ. ಕೆಲಸಕ್ಕೆಂದು ಬೇರಂಕಿಯ ಸಮೀಪ ನಡೆದುಕೊಂಡು ಬರುತ್ತಿರುವಾಗ ಹೆಜ್ಜೇನು ದಾಳಿ ನಡೆಸಿದೆ. ಇವರ ಜೊತೆಗೆ ಇದ್ದ ಇನ್ನಿರ್ವರ ಮೇಲು ಜೇನು ದಾಳಿ ಮಾಡಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಜುನಾಥ್ ಗೆ ತೀವ್ರವಾಗಿ ಜೇನು ದಾಳಿ ನಡೆಸಿದ್ದರಿಂದ ಅವರನ್ನು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯದಲ್ಲಿಯೇ ಅಸುನೀಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒರ್ವ ಪುತ್ರನನ್ನು ಅಗಲಿದ್ದಾರೆ. ಈ ಸಂಬಂಧ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


