Wednesday, January 14, 2026
Wednesday, January 14, 2026
spot_img

ಬೆಂಗಳೂರಿನ ಹೆಮ್ಮೆ ಲಾಲ್‌ಬಾಗ್‌ನ ಫ್ಲವರ್‌ ಶೋಗೆ ಹೈ ಅಲರ್ಟ್‌, ಗ್ಲಾಸ್‌ ಹೌಸ್‌ ಸುತ್ತಮುತ್ತ ಬಿಗಿ ಭದ್ರತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉದ್ಯಾನನಗರಿಯ ಹೆಮ್ಮೆಯಾದ ಫ್ಲವರ್‌ ಶೋ ಶೀಘ್ರದಲ್ಲೇ ಆರಂಭವಾಗಲಿದೆ. ಗಣರಾಜ್ಯೋತ್ಸವದ ಹಿನ್ನೆಲೆ ಫ್ಲವರ್‌ ಶೋ ನಡೆಸಲಾಗುತ್ತಿದ್ದು, ಈ ಬಾರಿ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

ಆರ್‌ಸಿಬಿ ಕಾಲ್ತುಳಿತ ದುರಂತದ ಎಫೆಕ್ಟ್ ಸದ್ಯ ಬೆಂಗಳೂರು ಪ್ರಸಿದ್ಧ ಲಾಲ್‌ಬಾಗ್ ಫ್ಲವರ್ ಶೋಗೂ ತಟ್ಟಿದೆ. ಈ ಬಾರಿಯೂ ಫ್ಲವರ್ ಶೋಗೆ ಲಕ್ಷಾಂತರ ಜನ ಸೇರುವ ಸಾಧ್ಯತೆ ಹಿನ್ನೆಲೆ, ಪೊಲೀಸ್ ಇಲಾಖೆ ಮತ್ತು ತೋಟಗಾರಿಗೆ ಇಲಾಖೆ ಭಾರೀ ಕಟ್ಟೆಚ್ಚರ ವಹಿಸಿದೆ.

ಗಣರಾಜ್ಯೋತ್ಸವ ಹಿನ್ನೆಲೆ 219ನೇ ಫಲಪುಷ್ಪ ಪ್ರದರ್ಶನ ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ. ಕಳೆದ ವರ್ಷದಂತೆ ಈ ಭಾರಿಯೂ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ ಇದ್ದು, ಆರ್‌ಸಿಬಿ ಕಾಲ್ತುಳಿತದ ದುರಂತದ ಎಫೆಕ್ಟ್ ಹಿನ್ನೆಲೆ ಈ ಬಾರಿ ಮುಂಜಾಗ್ರತಾ ಕ್ರಮವಾಗಿ ಹಲವು ಬದಲಾವಣೆಗಳೊಂದಿಗೆ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗಿದೆ.

ಇಂದಿನಿಂದ ಆರಂಭವಾಗಿ ಜನವರಿ 26ರವರೆಗೆ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಸುಮಾರು 12 ಲಕ್ಷಕ್ಕೂ ಹೆಚ್ಚು ಜನ ಸೇರುವ ಸಾಧ್ಯತೆ ಇದೆ. ಅದರಲ್ಲೂ ವೀಕೆಂಡ್ ಮತ್ತು ರಜಾ ದಿನಗಳಲ್ಲಿ ಸಾಮಾನ್ಯ ದಿನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಜನ ಹೆಚ್ಚಾಗಿ ಅಲ್ಲಲ್ಲಿ ಸಮಸ್ಯೆಯಾಗಬಾರೆದೆಂದು ಎಚ್ಚೆತ್ತಿರುವ ಇಲಾಖೆಗಳು, ಎಂಟ್ರಿ ಎಕ್ಸಿಟ್‌ಗಳ ಕಡೆ ಹೆಚ್ಚಿನ ಗಮನಕೊಟ್ಟಿದ್ದಾರೆ.

ಪುಷ್ಪಪ್ರದರ್ಶನದ ಪ್ರಮುಖ ಆಕಷರ್ಣೆ ಗಾಜಿನ ಮನೆ ಬಳಿ ಈ ಬಾರಿ ಹೆಚ್ಚಿನ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಇಷ್ಟು ವರ್ಷ ಪ್ರವಾಸಿಗರಿಗೆ ಇಲ್ಲಿ ನಿಲ್ಲಲ್ಲು ಅವಕಾಶ ಕಲ್ಪಿಸಲಾಗಿತ್ತು. ನಿಂತ ಜನ ಬೇರೆ ಕಡೆ ಹೋಗದ ಕಾರಣ ಒಂದೇ ಕಡೆ ಹೆಚ್ಚು ಜನ ಸೇರಿ ಸಮಸ್ಯೆಯಾಗಿತ್ತು. ಸದ್ಯ ಈ ಸಮಸ್ಯೆ ತಪ್ಪಿಸುವ ಕಾರಣಕ್ಕೆ, ಈ ಬಾರಿ ಗಾಜಿನ ಮನೆ ಸುತ್ತಲು ನೋ ಮ್ಯಾನ್ ಝೋನ್ ಮಾಡಿದ್ದು, ಜನ ಎಲ್ಲೂ ನಿಲ್ಲದೆ ಸಾಗುವಂತೆ ಸಿದ್ಧತೆ ಮಾಡಲಾಗಿದೆ.

Most Read

error: Content is protected !!