ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಅಂತಿಮಗೊಳ್ಳುವ ಸಾಧ್ಯತೆಯಿದೆ. ಹಲವು ದಿನಗಳ ಊಹಾಪೋಹ ಸುದ್ದಿಗಳಿಗೆ ಬಿಜೆಪಿ ವರಿಷ್ಠರು ತೆರೆ ಎಳೆಯುವ ಕಾಲ ಸನ್ನಿಹಿತವಾಗಿದೆ.
2020ರಿಂದ ಜೆಪಿ ನಡ್ಡಾ ಅವರು ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇಂದ್ರ ಆರೋಗ್ಯ ಸಚಿವರೂ ಆಗಿರುವ ನಡ್ಡಾ, ಅವರ ಉತ್ತರಾಧಿಕಾರಿಯ ರೇಸ್’ನಲ್ಲಿ ಹಲವು ನಾಯಕರುಗಳ ಹೆಸರು ಕೇಳಿ ಬಂದಿತ್ತು. ಖಚಿತ ಮೂಲಗಳ ಪ್ರಕಾರ, ಜನವರಿ 20ಕ್ಕೆ ಅಧ್ಯಕ್ಷರ ಹೆಸರು ಘೋಷಣೆಯಾಗಲಿದೆ.
ಖಚಿತ ಮಾಹಿತಿಗಳ ಪ್ರಕಾರ, ಜನವರಿ ಇಪ್ಪತ್ತರಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರ ಹೆಸರು ಅಧಿಕೃತವಾಗಿ ಘೋಷಣೆಯಾಗಲಿದೆ ಎನ್ನಲಾಗಿದೆ. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗಾಗಿ ಜನವರಿ 19ರಂದು ನಾಮಪತ್ರ ಸಲ್ಲಿಕೆಯಾಗಲಿದೆ. ಈಗಾಗಲೇ, ಇದಕ್ಕಾಗಿ ನಾಮಪತ್ರದ ಮೂರು ಸೆಟ್ ಅನ್ನು ನಿತಿನ್ ನಬಿನ್ ರೆಡಿ ಮಾಡಿಕೊಂಡಿದ್ದಾರೆ. ಆ ಮೂಲಕ, ಹಲವು ದಿನಗಳ ಅಂತೆಕಂತೆ ಸುದ್ದಿಗಳಿಗೆ ಜ.20ರಂದು ಅಧಿಕೃತವಾಗಿ ತೆರೆಬೀಳಲಿದೆ. ಆಂತರಿಕ ಸರ್ಕ್ಯೂಲರ್ ಅನ್ನು ಕೂಡಾ ಬಿಜೆಪಿ ನಾಯಕರಿಗೆ ಹೊರಡಿಸಲಾಗಿದೆ.


