January14, 2026
Wednesday, January 14, 2026
spot_img

ರಾಜ್​ಕೋಟ್​ನಲ್ಲಿ ಕೆಎಲ್ ರಾಹುಲ್ ಶತಕ: ನ್ಯೂಜಿಲ್ಯಾಂಡ್​ಗೆ ಬಿಗ್ ಟಾರ್ಗೆಟ್ ನೀಡಿದ ಭಾರತ!

ಹೊಸದಿಗಂತ ಡಿಜಿಟಲ್ ಡೆಸ್ಕ್;

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ (ODI) ಪಂದ್ಯದಲ್ಲಿ ಕೆಎಲ್ ರಾಹುಲ್ ಅವರ ಶತಕದ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನದಿಂದ ಭಾರತ ಸ್ಪರ್ಧಾತ್ಮಕ ಗುರಿಯನ್ನು ಕಲೆ ಹಾಕಿದೆ. ಭಾರತ ನಿಗದಿತ 50 ಓವರ್​​ಗಳಲ್ಲಿ 7 ವಿಕೆಟ್ ಕಳೆದುಕೊಂಡು 284 ರನ್ ಗಳಿಸಿದೆ.

ಭಾರತದ ಪರ ಕೆಎಲ್ ರಾಹುಲ್ 112 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿಕೊಂಡಿದ್ದಾರೆ.

ಟಾಸ್ ಸೋತ ನಂತರ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಶುಭಮನ್ ಗಿಲ್ ಮತ್ತು ರೋಹಿತ್ ಶರ್ಮಾ ಉತ್ತಮ ಆರಂಭವನ್ನು ನೀಡಿದರು . ಇವರಿಬ್ಬರು ಮೊದಲ ವಿಕೆಟ್‌ಗೆ 70 ರನ್‌ಗಳ ಜೊತೆಯಾಟ ಹಂಚಿಕೊಂಡರು . ರೋಹಿತ್ ಶರ್ಮಾ 24 ರನ್‌ಗಳಿಗೆ ಔಟಾದರು. ಆದರೆ ಗಿಲ್ (56) ಸತತ ಎರಡನೇ ಅರ್ಧಶತಕ ಬಾರಿಸಿ ಮಿಂಚಿದರು. ಬಿಗ್ ಇನ್ನಿಂಗ್ಸ್ ನಿರೀಕ್ಷೆಯಲ್ಲಿದ್ದ ವಿರಾಟ್ ಕೊಹ್ಲಿ 23 ರನ್‌ಗಳಿಗೆ ಕ್ಲಾರ್ಕ್ ಬೌಲಿಂಗ್‌ನಲ್ಲಿ ಔಟಾದರು. ಮತ್ತೊಂದೆಡೆ ಭರವಸೆ ಬ್ಯಾಟರ್ ಶ್ರೇಯಸ್ ಕೂಡ ಕ್ಲಾರ್ಕ್‌ಗೆ ಬೌಲ್ಡ್ ಆದರು.

ಟಾಪ್ ಬ್ಯಾಟರ್ಸ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಕೆಎಲ್ ರಾಹುಲ್ ಮತ್ತು ಜಡೇಜಾ ನೆರವಾದರು. ಈ ಜೋಡಿ ಐದನೇ ವಿಕೆಟ್‌ಗೆ 73 ರನ್‌ಗಳನ್ನು ಸೇರಿಸುವ ಮೂಲಕ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿದರು. ಉತ್ತಮವಾಗಿ ಆಡುತ್ತಿದ್ದ ಜಡೇಜಾ ಅವರನ್ನು ಕಿವೀಸ್ ನಾಯಕ ಮೈಕೆಲ್ ಬ್ರೇಸ್‌ವೆಲ್ ಕಟ್ಟಿ ಹಾಕಿದರು. ಈ ಮೂಲಕ ರಾಹುಲ್ ಮತ್ತು ಜಡೇಜಾ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತ್ತು. ನಿತೀಶ್ ಕುಮಾರ್ ರೆಡ್ಡಿ 20 ರನ್ ಗಳಿಸಿ ಔಟಾದರೆ, ಹರ್ಷಿತ್ ರಾಣಾ 2 ರನ್ ಗಳಿಸಿ ಹೊರ ನಡೆದರು. ಕೊನೆಯಲ್ಲಿ ರಾಹುಲ್ ಅಜೇಯ ಶತಕ ಬಾರಿಸಿದರೆ, ಮೊಹಮ್ಮದ್ ಸಿರಾಜ್ 2 ರನ್ ಗಳಿಸಿದರು.

ಐದನೇ ಕ್ರಮಾಂಕದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಕೆಎಲ್ ರಾಹುಲ್ ಅಜೇಯ ಶತಕ ಗಳಿಸಿದರು. ಇದು ಕೆಎಲ್ ರಾಹುಲ್ ಅವರ ಎಂಟನೇ ಏಕದಿನ ಶತಕ

Most Read

error: Content is protected !!