ಹೊಸದಿಗಂತ ವರದಿ, ಕಲಬುರಗಿ:
ನಗರದ ಹೊರವಲಯದ ಶರಣ ಸಿರಸಗಿ ಬಳಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಭಾರತ ಮಾತೇಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪ್ರಾರ್ಥನೆಯೊಂದಿಗೆ ಮಕರ ಸಂಕ್ರಾಂತಿಯ ಉತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಆಗಮಿಸಿದ ಶರಣಬಸಪ್ಪ ಪಾಟೀಲ ಮಾತನಾಡಿ,ಪರಿಸರದಲ್ಲಿ ಬದಲಾವಣೆ ಪ್ರಾರಂಭದ ದಿನ, ನಮ್ಮಲ್ಲಿಯೂ ಒಳ್ಳೆಯ ಬದಲಾವಣೆಗಳಾಗಲಿ. ಭಾರತೀಯ ಹಬ್ಬಗಳ ವೈಜ್ಞಾನಿಕ ಹಿನ್ನೆಲೆ ಬೇರೆ ಯಾವ ಪರಂಪರೆಗಳಲ್ಲಿ ಕಂಡುಬರುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಕರೆಸ್ಪಾಂಡೆಂಟ್ ಕೃಷ್ಣ ಜೋಶಿ, ಪ್ರಧಾನಾಚಾರ್ಯ ವಂಶಿ ಕೃಷ್ಣ, ಆಡಳಿತಾಧಿಕಾರಿ ಶ್ರೀಕಾಂತ್ ಪಾಟೀಲ್, ಶೈಕ್ಷಣಿಕ ಸಂಯೋಜಕ ರವಿಕುಮಾರ ಸೇರಿದಂತೆ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಮಕ್ಕಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಕ್ಕಳು ಸುಗ್ಗಿಯ ಹಾಡು ಹಾಗೂ ಸುಗ್ಗಿ ನೃತ್ಯ ಪ್ರಸ್ತುತ ಪಡಿಸಿದರು.ಇದೇ ಸಂದರ್ಭದಲ್ಲಿ ಕಥಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಂತಕುಮಾರಿ.ಎಂ ಸ್ವಾಗತಿಸಿದರು.ಭಾಗ್ಯಶ್ರೀ ವಂದಿಸಿದರೇ,ಅಂಬಿಕಾ.ಎಸ್ ನಿರೂಪಿಸಿದರು.ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.


